ಬೆಳ್ತಂಗಡಿ: 4 ದಿನ ಅಧಿಕ ಮಳೆ, ರೆಡ್ ಅಲರ್ಟ್ ಘೋಷಣೆ-ಮುಂಜಾಗ್ರತೆ ವಹಿಸುವಂತೆ ಸೂಚನೆ- ಜನಸ್ಪಂದನಾ ಕಾರ್ಯಕ್ರಮ ಮುಂದೂಡಿಕೆ

0

ಬೆಳ್ತಂಗಡಿ: ಮುಂಗಾರು ಚುರುಕುಗೊಂಡಿದ್ದು ಜೂನ್ 22 ಶನಿವಾರದಿಂದ ನಾಲ್ಕು ದಿನಗಳು ತಾಲೂಕಿನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು ಎರಡು ದಿನ ರೆಡ್ ಅಲರ್ಟ್ ಹಾಗೂ ಎರಡು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು ಸಾರ್ವಜನಿಕರು ಮುಂಜಾಗ್ರತೆ ವಹಿಸುವಂತೆ ಬೆಳ್ತಂಗಡಿ ತಹಶೀಲ್ದಾ‌ರ್ ಪೃಥ್ವಿ ಸಾನಿಕಮ್ ತಿಳಿಸಿದ್ದಾರೆ.

ಜೂ.22ರಿಂದ ಆರೆಂಜ್ ಅಲೆರ್ಟ್ ಇದ್ದು ಮಳೆ ಪ್ರಮಾಣ ಹೆಚ್ಚಾಗಲಿದೆ. ಜೂ.22ರಂದು ಹಾಗೂ ಜೂ.25ರಂದು ಆರೆಂಜ್ ಅಲರ್ಟ್, ಜೂ.23 ಮತ್ತು ಜೂ.24ರಂದು ರೆಡ್ ಅಲರ್ಟ್ ಹೊಂದಿದೆ. ಈ ಸಂದರ್ಭದಲ್ಲಿ ಸಿಡಿಲು, ಮಿಂಚು ಸಂಭವಿಸುವ ಸಾಧ್ಯತೆಯಿರುವುದರಿಂದ ಜನಸಾಮಾನ್ಯರು ಮರದಡಿ, ಬಯಲು ಪ್ರದೇಶದಲ್ಲಿ ಒಂದೆಡೆ ನಿಲ್ಲಬಾರದು. ಜತೆಗೆ ಈ ಹಿಂದೆ ಭೂಕುಸಿತ ಸಂಭವಿಸಿದ್ದ ಸ್ಥಳದಲ್ಲಿ ವಾಸಿಸುತ್ತಿರುವವರು ತಕ್ಷಣವೇ ಸ್ಥಳ ಬದಲಿ ವ್ಯವಸ್ಥೆ ಮಾಡಬೇಕು.

ತುರ್ತು ಸಂದರ್ಭಗಳಲ್ಲಿ ಸ್ಥಳೀಯ ಪಿಡಿಒ ಗಳನ್ನು ಸಂಪರ್ಕಿಸಬೇಕು. ಜತೆಗೆ ತುರ್ತು ಸಂಪರ್ಕಕ್ಕಾಗಿ ತಾಲೂಕು ಕಂಟ್ರೋಲ್ ರೂಮ್ 08256 232047 ಸಂಪರ್ಕಿಸುವಂತೆ ತಹಶೀಲ್ದಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜನಸ್ಪಂದನಾ ಕಾರ್ಯಕ್ರಮ ಮುಂದೂಡಿಕೆ: ತಾಲೂಕಿನ ಲಾಯಿಲ ಸಂಗಮ ಸಭಾಭವನದಲ್ಲಿ ಜೂ.24ರಂದು ನಡೆಯಬೇಕಿದ್ದ ಜನಸ್ಪಂದನಾ ಕಾರ್ಯಕ್ರಮ ಮುಂದೂಡಲಾಗಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಇರುವ ಕಾರಣ ಕಾರ್ಯಕ್ರಮ ಮುಂದೂಡಲಾಗಿದೆ.

LEAVE A REPLY

Please enter your comment!
Please enter your name here