ಮಾಯ ದೇವಸ್ಥಾನದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ಬೆಳಾಲು: ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಬೆಳಾಲು ಶ್ರೀ ಮಾಯ ಮಹದೇವ ದೇವಸ್ಥಾನದ ವಠಾರದಲ್ಲಿ 7ರಿಂದ 15 ದಿನಗಳ ಕಾಲ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯ ಆಸ್ಪತ್ರೆ ಉಜಿರೆ, ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಬೆಳ್ತಂಗಡಿ, ಲಿಯೋ ಕ್ಲಬ್ ಬೆಳ್ತಂಗಡಿ ಸಹಯೋಗದಲ್ಲಿ ನಡೆದ ಯೋಗ ತರಬೇತಿ ಶಿಬಿರ ಜೂ.21ರಂದು ಸಮಾರೋಪಗೊಂಡಿತು.

ಯೋಗ ತರಬೇತಿ ನೀಡಿದ ಕು.ದೀಪ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ನ ಸದಸ್ಯರಾದ ಲ.ಚಂದ್ರ ಕುಮಾರ್ ಶೆಟ್ಟಿ ನಾರ್ಯ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಯೋಗಾಸನ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಶುಭಾಶಯ ಕೋರುತ್ತಾ ಯೋಗದಿಂದ ಆರೋಗ್ಯವಂತ ಜೀವನ ನಿಮ್ಮದಾಗಲಿ ಎಂದು ತಿಳಿಸಿದರು.

ವೇದಿಕೆಯಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ಲ.ಡಾ.ದೇವಿಪ್ರಸಾದ್ ಬೊಲ್ಮ, ಲಿಯೋ ಕ್ಲಬ್ ನ ಕಾರ್ಯಕ್ರಮ ಸಂಯೋಜಕರಾದ ಲಿಯೋ ಗ್ಲೆನ್ ಉಪಸ್ಥಿತರಿದ್ದರು.

ಯೋಗ ತರಬೇತಿ ನೀಡಿದ ಎಸ್ ಡಿ ಎಮ್ ಯೋಗ ವಿಜ್ಞಾನಿಗಳ ಕಾಲೇಜಿನ ಕು.ದೀಪ ಇವರನ್ನು ಶಿಬಿರಾರ್ಥಿಗಳ ಪರವಾಗಿ ಗೌರವಿಸಲಾಯಿತು.ಯೋಗ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಭಾರತ ಸಂವಿಧಾನದ ಅರಿವು ಪುಸ್ತಕವನ್ನು ನೀಡಲಾಯಿತು.

LEAVE A REPLY

Please enter your comment!
Please enter your name here