ಮಂಗಳೂರು ಎಸ್ ಕೆ ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ಇದರ ವಜ್ರ ಮಹೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ಗುರುವಾಯನಕೆರೆ, ಸಂತೆಕಟ್ಟೆ ಬೆಳ್ತಂಗಡಿ ಶಾಖೆಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ

0

ಬೆಳ್ತಂಗಡಿ: ಮಂಗಳೂರು ಎಸ್ ಕೆ ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ಇದರ ವಜ್ರ ಮಹೋತ್ಸವದ ಸಂಭ್ರಮಾಚರಣೆ 2024 ಇದರ ಪ್ರಯುಕ್ತ ಜೂನ್ 21ರಂದು ಶಾಖೆ ಗುರುವಾಯನಕೆರೆ, ಸಂತೆಕಟ್ಟೆ ಬೆಳ್ತಂಗಡಿಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ ಜರುಗಿತು.

ಸಂಸ್ಥೆಯ ಉಪಾಧ್ಯಕ್ಷ ಎ.ಆನಂದ ಆಚಾರ್ಯ ಪುತ್ತೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾದ ದಿವಾಕರ ಆಚಾರ್ಯ ನಿವೃತ್ತ ಪ್ರಾಂಶುಪಾಲರು, ಮೋಹನ್ ದಾಸ್.ಎ ಧಾರ್ಮಿಕ ಚಿಂತಕರು, ಗಣೇಶ್ ಆಚಾರ್ಯ ಬಲ್ಯಾಯಕೋಡಿ ಅಧ್ಯಕ್ಷರು ವಿಶ್ವಕರ್ಮಾಭ್ಯುದಯ ಸಭಾ ಲಾಯಿಲ, ಬೆಳ್ತಂಗಡಿ, ಮುಖೇಶ್ ಯೋಗೀಶ್ ಆರ್ ನಾಯಕ್ ಕಟ್ಟಡ ಮಾಲಿಕರು, ಮಂಜುನಾಥ ಆಚಾರ್ಯ ನಿರ್ದೇಶಕರು, ಪ್ರಶಾಂತ್ ಹೆಚ್ ಆಚಾರ್ಯ ಶಾಖಾ ವ್ಯವಸ್ಥಾಪಕರು ಇವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವುದರ‌ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ಸಂಸ್ಥೆಯ ಸದಸ್ಯರಾದ ಕುಮಾರಿ ರಕ್ಷಿತಾ ಇವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಸಂಸ್ಥೆಯ ಸಿಬ್ಬಂದಿ ಸುಶಾಂತ ಆಚಾರ್ಯ ಇವರು ಪ್ರಾಸ್ತವಿಕ ನುಡಿಗಳನ್ನಾಡಿದರು. ಶಾಖಾ ವ್ಯವಸ್ಥಾಪಕರಾದ ಪ್ರಶಾಂತ್ ಹೆಚ್ ಆಚಾರ್ಯ ಇವರು ಸಮಾರಂಭಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು.

ಪರಿಸರದ‌ ಬಗ್ಗೆ ಮುಖ್ಯ ಅತಿಥಿಯಾದ ದಿವಾಕರ ಆಚಾರ್ಯ ನಿವೃತ್ತ ಪ್ರಾಂಶುಪಾಲರು “ಪರಿಸರವನ್ನು ನಾಶ ಮಾಡಿದರೆ ಕಾಲ ಕಾಲಕ್ಕೆ ಸರಿಯಾದ ಮಳೆ ಬರುವುದಿಲ್ಲ, ಕಾಲ ಕಾಲಕ್ಕೆ ಮರಗಳಲ್ಲಿ ಹಣ್ಣುಗಳು ಇರುವುದಿಲ್ಲ, ಭೂಕಂಪದಂತಹ ನೈಸರ್ಗಿಕ ವಿಕೋಪಗಳು ಕಾಣುತ್ತಿದ್ದೇವೆ. ಈಗಿನ ಮಕ್ಕಳು ಗಿಡವನ್ನು ನೆಟ್ಟು ಅದನ್ನು ಪಾಲಿಸಿ ಫೋಷಣೆ ಮಾಡಿ ದೊಡ್ಡ ಮರವನ್ನಾಗಿ ಬೆಳೆಸಬೇಕು”. ಅದರ ಜವಾಬ್ದಾರಿ ನಮಗೆಲ್ಲರಿಗಿರಬೇಕು ಮತ್ತು ಪರಿಸರವನ್ನು ಉಳಿಸಿ ನಾವೆಲ್ಲರು ಕೈ ಜೋಡಿಸೋಣ ಎಂದು ಪರಿಸರದ ಮಹತ್ವನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಉಪಾಧ್ಯಕ್ಷ ಆನಂದ ಆಚಾರ್ಯ ಇವರು ಸಂಸ್ಥೆ ಬೆಳೆದು ಬಂದ ದಾರಿ, ಅಭಿವೃದ್ಧಿ, ಗ್ರಾಹಕರಿಗೆ ನೀಡುವ ಸವಲತ್ತು ಮತ್ತು ವನಮಹೋತ್ಸವದ ಬಗ್ಗೆ ಮಾತನಾಡಿದರು.ಮೋಹನ್ ದಾಸ್.ಎ. ಧಾರ್ಮಿಕ ಚಿಂತಕರು ಇವರು “ಒಂದು ಉತ್ತಮವಾದ ಕಾರ್ಯಕ್ರಮವೆಂದರೆ ವನಮಹೋತ್ಸವ” ಎಂದು ತಿಳಿಸಿದರು. ಗಣೇಶ್ ಆಚಾರ್ಯ ಬಲ್ಯಾಯಕೋಡಿ ಅಧ್ಯಕ್ಷರು ವಿಶ್ವಕರ್ಮಾಭ್ಯುದಯ ಸಭಾ ಲಾಯಿಲ ಬೆಳ್ತಂಗಡಿ, ಇವರು ಪರಿಸರದ ಬಗ್ಗೆ “ಮರವನ್ನು ನೆಡುದು ಮಾತ್ರವಲ್ಲ ಅದಕ್ಕೆ ಬೇಸಿಗೆ ಕಾಲದಲ್ಲಿ ನೀರನ್ನು ಹಾಕಿ ಸಂರಕ್ಷಿಸಬೇಕೆಂದು” ತಿಳಿಸಿದರು.

ಮಂಜುನಾಥ ಆಚಾರ್ಯ ನಿರ್ದೇಶಕರು ಇವರು ವನಮಹೋತ್ಸವದ ಬಗ್ಗೆ ಹಿತನುಡಿಗಳನ್ನು ನುಡಿದರು. ಕಾರ್ಯಕ್ರಮದ‌ಲ್ಲಿ ಜನತಾ ನಿಧಿ ಸಂಗ್ರಾಹಕರು, ಚಿನ್ನಾಭರಣ ಮೌಲ್ಯಮಾಪಕರು, ಠೇವಣಿದಾರರು ಹಾಗೂ ಸದಸ್ಯ ಗ್ರಾಹಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ಗುರುಪ್ರಸಾದ್ ಇವರು ಧನ್ಯವಾದವನ್ನು‌ ನೀಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

p>

LEAVE A REPLY

Please enter your comment!
Please enter your name here