


ಮಾಯಾ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಲ್ಲಿ ಕಳೆದ 20 ವರ್ಷಗಳಿಂದ ಆರೋಗ್ಯ ಸಹಾಯಕಿಯಾಗಿ ಸೇವೆಯನ್ನು ಸಲ್ಲಿಸಿ, ಇದೀಗ ಅನಾರೋಗ್ಯದಿಂದ ಬಳಲುತ್ತಿರುವ ಉಜಿರೆ ವಲಯದ ಮಾಯ ಕಾರ್ಯಕ್ಷೇತ್ರದ ಚಿತ್ರಾ ಆರ್. ರವರಿಗೆ ಶ್ರೀ ಕ್ಷೇತ್ರದಿಂದ ಮಾಶಾಸನ ಮಂಜೂರಾಗಿದ್ದು. ಪ್ರಸ್ತುತ ಇವರ ಮನೆ ಭೇಟಿ ಮಾಡಿ ಯೋಜನೆಯಿಂದ ಮಂಜೂರಾದ ಮಾಶಾಸನವನ್ನು ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯ್ಸ್ ರವರು ವಿವರಿಸಿದರು.


ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಶ್ರೀ ಸುರೇಂದ್ರ ಕುಮಾರ್, ವಿಪತ್ತು ಘಟಕದ ಯೋಜನಾಧಿಕಾರಿ ಜೈವಂತ ಪಟೇಗಾರ್, ಉಜಿರೆ ವಲಯದ ಮಾಜಿ ವಲಯಾಧ್ಯಕ್ಷ ವಿಜಯ್ ಜಿ, ಅರಳಿ, ಶೌರ್ಯ ತಂಡದ ಕ್ಯಾಪ್ಟನ್ ಸಂತೋಷ್, ಸ್ವಯಂಸೇವಕ ಸುಧೀರ್, ಮೇಲ್ವಿಚಾರಕಿ ವನಿತಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರಾ, ಸೇವಾಪ್ರತಿನಿಧಿ ಪ್ರಭಾ, ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್, ಮನೆಯ ಸದಸ್ಯರು ಉಪಸ್ಥಿತರಿದ್ದರು.









