ಸುಲ್ಕೇರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಪದಗ್ರಹಣ

0

ಸುಲ್ಕೇರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಗುರುವಾಯನಕೆರೆ, ಅಳದಂಗಡಿ ವಲಯದ ಸುಲ್ಕೆರಿ ಎ ಹಾಗೂ ಬಿ ಒಕ್ಕೂಟದ ಪದಗ್ರಹಣ ಕಾರ್ಯಕ್ರಮವು, ಪ್ರಗತಿ ಬಂದು ಒಕ್ಕೂಟದ ಅಧ್ಯಕ್ಷ ಆನಂದ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರ್ ಸುಲ್ಕೇರಿಮೊಗ್ರು ಉದ್ಘಾಟಿಸಿ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನರ ಜೀವನಮಟ್ಟ ಸುಧಾರಣೆಯಾಗಿದೆ, ನಮ್ಮ ಊರಿನ ದೇವಸ್ಥಾನ ಹಾಗೂ ಗರಡಿಯ ಅಭಿವೃದ್ಧಿಗೆ ಕ್ಷೇತ್ರದಿಂದ ಅನುದಾನ ಬಂದಿರುತ್ತದೆ, ಕೃಷಿ ಹಾಗೂ ಕೃಷಿಯೆತಾರ ಅಭಿವೃದ್ಧಿಯಾಗಿದೆ.

ಗ್ರಾಮ ಅಭಿವೃದ್ಧಿ ಯೋಜನೆ ಉಪಕಾರ ಸ್ಮರಣೆಯನ್ನು ನೆನೆಯುತ್ತ ಮುನ್ನಡೆಯಬೇಕೆಂದು ಎಂದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ದಕ್ಷಿಣ ಕನ್ನಡ 1 ಜಿಲ್ಲೆಯ ನಿರ್ದೇಶಕ ಮಹಾಬಲ ಕುಲಾಲ್ ರವರು ಮಾತನಾಡುತ್ತಾ, 40 ವರ್ಷದ ಇಂದಿನ ನಮ್ಮ ಜನರ ಜೀವನ ಮಟ್ಟ ಹಾಗೂ ನಮ್ಮ ಊರಿನ ಸ್ಥಿತಿಗತಿ ಹೇಗಿತ್ತು, ಈಗ ಎಲ್ಲಾ ರಂಗದಲ್ಲೂ ನಾವು ಅಭಿವೃದ್ಧಿಯನ್ನು ಕಂಡಿದ್ದೇವೆ ಇದಕ್ಕೆ ಮುಖ್ಯ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಚಟುವಟಿಕೆಗಳು ಹಾಗೂ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ವಿವಿಧ ಅನುದಾನಗಳ ಬಗ್ಗೆ ವಿವರವಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಳೆ, ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮುಕ್ತೇಸರ ಎಚ್.ಎಲ್.ರಾವ್, ಅಳದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಜನಜಾಗೃತಿ ತಾಲೂಕು ಸದಸ್ಯ ಜಗನ್ನಾಥ್ ಬಂಗೇರ ವರ್ಪಳೆ, ದೇವಸ್ಥಾನದ ಸಮಿತಿಯ ಅಧ್ಯಕ್ಷರು ವೆಂಕಪ್ಪ ಪೂಜಾರಿ, ಪೂಜಾ ಸಮಿತಿಯ ಅಧ್ಯಕ್ಷ ರಾಜೇಶ್ ಪರಂಟ್ಯಾಲ, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಶಕುಂತಲಾ, ನೂತನ ಅಧ್ಯಕ್ಷ ಪ್ರಕಾಶ್ ಕೊಲ್ಲಂಗೆ, ಗೀತಾ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸತೀಶ್ ಎಸ್ಎಂ ರವರು ನಿರ್ವಹಿಸಿದರು. ಮೇಲ್ವಿಚಾರಕಿ ಸುಮಂಗಲ ಸ್ವಾಗತಿಸಿ, ಶ್ರೀಧರ್ ಅಂಚನ್ ವಂದಿಸಿದರು.

LEAVE A REPLY

Please enter your comment!
Please enter your name here