ನಡ: ಮಣ್ಣಿನ ಹರಕೆಯ ಪುಣ್ಯಕ್ಷೇತ್ರ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ದಿ.ಸುಭಾಶ್ಚಂದ್ರ ಸುರ್ಯಗುತ್ತು ಇವರ ಸ್ಮರಣಾರ್ಥ ಜೂ.15ರಂದು ಕ್ಷೇತ್ರದಲ್ಲಿ ಕನ್ಯಾಡಿ ಸ.ಉ.ಪ್ರಾ.ಶಾಲೆ 1ರಿಂದ 8ನೇ ತರಗತಿವರೆಗಿನ ಒಟ್ಟು 70 ಮಕ್ಕಳು ಹಾಗೂ ಸ.ಕಿ.ಪ್ರಾ.ಶಾಲೆ ಸುರ್ಯದ 1 ರಿಂದ 5ನೇ ತರಗತಿವರೆಗಿನ 32 ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಆನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಸತೀಶ್ಚಂದ್ರ ಸುರ್ಯಗುತ್ತು ಇವರು ವಿತರಿಸಿದರು.
ಈ ಸಂದರ್ಭದಲ್ಲಿ ಸಂದೀಪಾ ಸತೀಶ್ಚಂದ್ರ, ಸಂಗ್ರಾಮ್. ಎಸ್, ಕೃತಿ ಸಂಗ್ರಾಮ್, ಧನಂಜಯ ಅಜ್ರಿ ನಡಗುತ್ತು, ಬಿ.ರಾಜಶೇಖರ ಅಜ್ರಿ, ಮುನಿರಾಜ ಅಜ್ರಿ, ಡಾ.ಪ್ರದೀಪ್ ನಾವೂರು, ವಕೀಲ ಶಶಿಕಿರಣ್ ಜೈನ್, ಸುರ್ಯಗುತ್ತು ಕುಟುಂಬಸ್ಥರು, ಅಧ್ಯಾಪಕ ಜಯಾ, ಶೋಭಾ, ಎಸ್. ಡಿ. ಎಂ. ಸಿ ಅಧ್ಯಕ್ಷ ನೊಣಯ್ಯ ಗೌಡ, ಪದ್ಮಾವತಿ ಸುಕೇಶ್ ಪೂಜಾರಿ, ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶಾಲೆಯ ಪರವಾಗಿ ಅಧ್ಯಾಪಕ ವಿಕಾಸ್ ಇವರು ಕೃತಜ್ಞತೆಗಳನ್ನು ಸಲ್ಲಿಸಿದರು.
p>