ಪೆಟ್ರೋಲ್ ಬೆಲೆ ಏರಿಸುವ ಮೂಲಕ ರಾಜ್ಯ ಸರಕಾರದ ಬಣ್ಣ ಬಯಲಾಗಿದೆ: ಪ್ರತಾಪಸಿಂಹ ನಾಯಕ್

0

ಬೆಳ್ತಂಗಡಿ: ಪೆಟ್ರೋಲ್ ದರ ಏರಿಸುವ ಮೂಲಕ ರಾಜ್ಯಸರಕಾರದ ಬಣ್ಣ ಬಯಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದ್ದಾರೆ.

ಪಂಚ ಭಾಗ್ಯಗಳನ್ನು ನೀಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಸರಕಾರ ಇದೀಗ ಆರ್ಥಿಕ ಹಿನ್ನಡೆಯಿಂದ ಬಳಲುತ್ತಿದೆ. ಯಾವುದೇ ಅಭಿವೃದ್ಧಿಕಾರ್ಯಗಳಿಗೆ ಹಣ ಇಲ್ಲದೆ ಪರದಾಡುತ್ತಿದೆ. ಇದರಿಂದ ಸ್ವಪಕ್ಷೀಯರೇ ಅಸಮಾಧಾನಗೊಂಡಿದ್ದು ಮುಖ್ಯಮಂತ್ರಿಯವರು ಕಂಗಾಲಾಗಿರುವುದು ಸ್ಪಷ್ಟ.

ಉಚಿತ ಭಾಗ್ಯಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದ್ದು ಅದನ್ನು ಭರಿಸುವುದಕ್ಕೋಸ್ಕರ ಇದೀಗ ಪೆಟ್ರೋಲ್ ನ ಸೆಸ್ ಏರಿಸಿರುವುದು ಜನ ಸಾಮಾನ್ಯರಿಗೆ ಹೊರೆಯಾಗಲಿದೆ. ಸರಕಾರ ಏಕಾಏಕಿ ಪೆಟ್ರೋಲ್ ದರ ಏರಿಸಿರುವುದು ಖಂಡನೀಯ ಇದನ್ನು ಹಿಂತೆಗೆದುಕೊಳ್ಳಬೇಕು ಎಂದು ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here