ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಜೂನ್ 15ರಂದು ಹೆಚ್.ಐ.ವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಮತ್ತು ಮಾಹಿತಿ ಕಾರ್ಯಕ್ರಮವು ಬೆಳ್ತಂಗಡಿ ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು.
ಸರಕಾರಿ ಪ್ರಥಮ ದರ್ಜೆ ಮೇಲಂತಬೆಟ್ಟು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಆಂಟನಿ ಟಿ.ಪಿ.ರವರು ಆಗಮಿಸಿ, ನಾವೆಲ್ಲರೂ ಸ್ವರ್ಗಭೂಮಿಯಲ್ಲಿದ್ದು ಆಶಾವಾದಿಗಳಾಗಿ ಬದುಕೋಣ ಎಂದು ಮಾತನಾಡಿ ಪೌಷ್ಟಿಕ ಆಹಾರದ ಕಿಟ್ಟನ್ನು ವಿತರಿಸಿದರು.
ಪುಷ್ಪರಾಜ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ಫಾ.ಬಿನೋಯಿ ಎ.ಜೆ. ರವರು ಪರಸ್ಪರ ಮನಸ್ಥೈರ್ಯ, ಮನೋಭಾವವನ್ನು ನಮ್ಮ ಬದುಕಲ್ಲಿ ಹುರಿದುಂಬಿಸಬೇಕು ಎಂದು ಪ್ರಾಸ್ತವಿಕ ನುಡಿಯನ್ನು ಆಡಿದರು.
ನವ ಜೀವನ ಬೆಂಬಲ ಕಾರ್ಯಕ್ರಮದ ಸದಸ್ಯೆ ಶಶಿಕಲಾರವರು ಪ್ರಾರ್ಥನೆ ಹಾಡಿದರು. ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ಸoಯೋಜಕ ಸುನಿಲ್ ಗೊನ್ವಾಲ್ವಿಸ್ ಎಲ್ಲರನ್ನು ಸ್ವಾಗತಿಸಿದರು. ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ಸoಯೋಜಕಿ ಸಿಸಿಲಿಯ ತಾವ್ರೊ ಎಲ್ಲರನ್ನು ವಂದಿಸಿದರು.
ಸoಯೋಜಕಿ ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾತು.