


ಬಳಂಜ: ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯಮಟ್ಟದ ಅಂಡರ್ 18 ಮಹಿಳಾ ವಿಭಾಗದಲ್ಲಿ ಅತ್ಲೆಟಿಕ್ಸ್ ಕ್ರೀಡಾ ಕೂಟದ ಡಿಸ್ಕಸ್ ಥ್ರೋ ವಿಭಾಗದಲ್ಲಿ ಸುಷ್ಮಾ ಬಿ.ಪೂಜಾರಿ ಯೈಕುರಿ ನಾಲ್ಕೂರು ಇವರು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಗುಂಡೆಸೆತ ಮತ್ತು ಡಿಸ್ಕಸ್ ಥ್ರೋ ರಾಜ್ಯ ಮಟ್ಟದ ಸ್ಪರ್ದೇಯಲ್ಲಿ ಹಲವಾರು ಬಾರಿ ಭಾಗವಹಿ ಇದೀಗ 3ನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಇವರು ಪ್ರಸ್ತುತ ಆಳ್ವಾಸ್ ಕಾಲೇಜು ಮೂಡುಬಿದರೆಯಲ್ಲಿ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರು ಬಳಂಜ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಬಾಲಕೃಷ್ಣ ಪೂಜಾರಿ ಯೈಕುರಿ ಹಾಗೂ ಮಾಲಿನಿ ದಂಪತಿ ಪುತ್ರಿಯಾಗಿರುತ್ತಾರೆ.









