ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಔಟ್ ಸೈಡ್ ವೀಲ್ ಚೇರ್ ವಿತರಣೆ

0

ನಾವೂರು: ಗ್ರಾಮದ ಬಣದಬಾಗಿಲು ನಿವಾಸಿ ಅನಿಯಾರು ಇವರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಜನಮಂಗಳ ಕಾರ್ಯಕ್ರಮದಡಿಯಲ್ಲಿ ವಿಶೇಷವಾಗಿ ನೀಡಿರುವ ಔಟ್ ಸೈಡ್ ವಿಲ್ ಚೇರ್ ನ್ನು ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ರವರು ಅನಿಯಾರು ಇವರ ಮನೆಯಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನಂದಾ, ತಾಲೂಕಿನ ಯೋಜನಾಧಿಕಾರಿ ಸುರೇಂದ್ರ, ಒಕ್ಕೂಟದ ಪದಾಧಿಕಾರಿ ವೇದಾವತಿ, ವಲಯ ಮೇಲ್ವಿಚಾರಕಿ ಉಷಾ, ಸೇವಾಪ್ರತಿನಿಧಿ ಪುಷ್ಪಲತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here