ಉಜಿರೆ: ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ವ್ಯಕ್ತಿತ್ವ ನಿರ್ಮಾಣ ಜೊತೆಗೆ ಸವಾಲುಗಳನ್ನು ಎದುರಿಸುವ ಚಾಕಚಕ್ಯತೆ ಬೆಳೆಸಿಕೊಂಡು ಕ್ರಿಯಾಶೀಲತೆಯಿಂದ ಮುನ್ನಡೆದರೆ ಅವಕಾಶಗಳು ನಮ್ಮನ್ನು ಅರಸಿ ಬರುವುದು, ಹಾಗಾಗಿ ಕಲಿಕೆಯ ಜೊತೆಗೆ ನಮ್ಮ ವ್ಯಕ್ತಿತ್ವ ಬೆಳವಣಿಗೆಗೆ ಪೂರಕ ವಿಷಯಗಳ ವಿಷಯಗಳ ಜ್ಞಾನ ಹಾಗೂ ತರಬೇತಿ ಪಡೆದುಕೊಳ್ಳಬೇಕು.
ಪದವಿಪೂರ್ವ ಹಂತದಲ್ಲಿ ನಮ್ಮ ಭವಿಷ್ಯದ ನಿರ್ಧಾರಗಳು ಬಹುತೇಕ ಖಚಿತಗೊಂಡರೆ ಗುರಿಯತ್ತ ಸಾಗಲು ಅದು ಪ್ರೇರೇಪಿಸುವುದು ಎಂದರು.
ಕಾಲೇಜಿನಲ್ಲಿ ಹೊಸದಾಗಿ ಸೇರ್ಪಡೆಗೊಂಡ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆಟ,ಉದಾಹರಣೆಗಳ ಮೂಲಕ ಕಾರ್ಯಗಾರವನ್ನು ಎಸ್.ಡಿ.ಎಂ ಪದವಿ ಕಾಲೇಜಿನ ಮನಶಾಸ್ತ್ರದ ಪ್ರಾಧ್ಯಾಪಕ ಸುಧೀರ್ ಕೆ.ವಿ ನಡೆಸಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಹಾಗೂ ರಸಾಯನಶಾಸ್ತ್ರದ ಉಪನ್ಯಾಸಕಿ ಚೈತ್ರ ಕೆ.ಎಸ್.ಉಪಸ್ಥಿತರಿದ್ದರು.ಗಣಕಶಾಸ್ತ್ರ ಉಪನ್ಯಾಸಕ ಕೃಷ್ಣಪ್ರಸಾದ್ ವಂದಿಸಿ, ನಿರೂಪಿಸಿದರು.