ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಬಾಗದ ಬಡತನ ನಿರ್ಮೂಲನೆಯಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ದ. ಕ 1 ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಹೇಳಿದರು.
ಅವರು ಜೂ.8ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೇಣೂರು ವಲಯದ ಬಜಿರೆ ಒಕ್ಕೂಟದ ಪದಗ್ರಹಣ ಮತ್ತು ಶನೇಶ್ವರ ಪೂಜಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೂಲಿ ಕಾರ್ಮಿಕರ ಸಮಸ್ಯೆಯನ್ನ ನೀಗಿಸುವುದು, ರೈತರಿಗೆ ತರಬೇತಿ, ಸರಕಾರಿ ಸೌಲಭ್ಯ ಗಳ ಒದಗಣೆ, ಉಳಿತಾಯದ ಮನೊಬಾವನೆ ಬೆಳೆಸುವುದು, ಕೃಷಿಗೆ ಉತ್ತೇಜನ, ಪರಸ್ಪರ ಸಹಕಾರದ ಮೂಲಕ ಶ್ರಮ ವಿನಿಮಯದ ಪರಿಕಲ್ಪನೆ ಮೂಡಿಸಿ ಸಂಘಟನೆಯ ಮೂಲಕ ಅಭಿವೃದ್ದಿ ಎಂಬ ಚಿಂತನೆ ಯೊಂದಿಗೆ 1982ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರು ಜಾರಿಗೆ ತಂದ ಗ್ರಾಮಾಭಿವದ್ಧಿ ಯೋಜನೆಯ ಮೂಲಕ ರಚಿಸಿದ ಪ್ರಗತಿ ಬಂಧು ಗುಂಪುಗಳು ಇಡೀ ದೇಶದಲ್ಲಿಯೇ ಮಾದರಿಯಾಗಿದೆ.
ಪ್ರಗತಿ ಬಂಧು ಗುಂಪುಗಳ ಶ್ರಮ ವಿನಿಮಯದ ಮೂಲಕ ರೈತರು ತಮ್ಮ ಕೃಷಿ ಅಭಿವೃದ್ದಿಯನ್ನು ಮಾಡಿಕೊಳ್ಳುವುದರ ಮುಖೇನ ಅಭಿವೃದ್ದಿ ಯನ್ನ ಹೊಂದಿದ್ದಾರೆ ರೈತರಿಗೆ ಅರ್ಥಿಕ ಶಕ್ತಿಯನ್ನ ನೀಡಿರುವ ಪರಿಣಾಮ ಹಂತ ಹಂತವಾಗಿ ತಮ್ಮ ಕೃಷಿ ಭೂಮಿಯನ್ನು ಅಭಿವೃದ್ದಿ ಪಡಿಸಲು ಗುಂಪುಗಳು ಸಹಕಾರಿ ಆಗಿವೆ ರೈತರಲ್ಲಿ ಒಗ್ಗಟ್ಟು ಮೂಡಿದೆ ಆತ್ಮ ವಿಶ್ವಾಸ ಹೆಚ್ಚಾಗಿದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೃಷಿಯನ್ನು ಉಳಿಸಿ ಬೆಳೆಸಿ ಗ್ರಾಮೀಣ ಬಾಗದ ಬಡತನ ನಿರ್ಮೂಲನೆ ಮಾಡುವಲ್ಲಿ ಕಳೆದ 42 ವರ್ಷಗಳಿಂದ ಮಹತ್ತರ ಪಾತ್ರ ವಹಿಸಿದೆ ಎಂದರು.
42 ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪ್ರಗತಿ ಬಂಧು ಗುಂಪುಗಳ ಸದಸ್ಯರಿಗೆ ಅಕ್ಕಿ, ಪಾತ್ರೆ, ಬುಟ್ಟಿ, ಬಟ್ಟೆ ಬರೆ, ಹಂಚು, ತೆಂಗಿನ ಗಿಡ, ಅಡಿಕೆ ಗಿಡ, ಮೊದಲಾದವುಗಳನ್ನು ನೀಡುವ ಮೂಲಕ ರೈತರಲ್ಲಿ ಚೈತನ್ಯ ಮೂಡಿಸಿ ಆವರ ಬದುಕಿನ ಪರಿವರ್ತನೆಗೆ ಚಾಲನೆ ನೀಡಲಾಗಿತ್ತು ಎಂದು ನೆನಪಿಸಿದರು ಕಾರ್ಯಕ್ರಮದ ಉದ್ಘಾಟನೆಯನ್ನು ರಮೇಶ್ ಕೆ. ಸರ್ವಮಂಗಳ ಬಜಿರೆ, ನಿವೃತ್ತ ಶಿಕ್ಷಣ ಸಂಯೋಜಕ ರು ಬೆಳ್ತಂಗಡಿ ಇವರು ನೆರವೇರಿಸಿದರು.
ವೇದಿಕೆಯಲ್ಲಿ ಉದ್ಯಮಿ ಬಾಸ್ಕರ್ ಪೈ ವೇಣೂರು, ಜನ ಜಾಗೃತಿ ವೇದಿಕೆ ಯ ನಿಕಟ ಪೂರ್ವ ವಲಯ ಅಧ್ಯಕ್ಷ ಹರೀಶ್ ಪೋಕ್ಕಿ, ತುಂಬದಲ್ಕೆ ಸತ್ಯ ನಾರಾಯಣ ಭಜನಾ ಮಂಡಳಿಯ ಅಧ್ಯಕ್ಷ ರಮೇಶ್ ಪೂಜಾರಿ, ಶ್ರೀ ವಿಘ್ನೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಪ್ರವೀಣ್ ಪೂಜಾರಿ, ತಾಲೂಕು ಜನ ಜಾಗೃತಿ ವೇದಿಕೆಯ ವೇಣೂರು ವಲಯದ ಅದ್ಯಕ್ಷ ಅಶೋಕ್ ಪೂಜಾರಿ, ಬಜಿರೆ ಒಕ್ಕೂಟದ ನೂತನ ಅಧ್ಯಕ್ಷ ಗಿರೀಶ್ ಕೆ ಕುಲಾಲ್, ಯೋಜನಾಧಿಕಾರಿ ದಯಾನಂದ ಪೂಜಾರಿ ಉಪಸ್ಥಿತರಿದ್ದರು.
ಸಬಾ ಅಧ್ಯಕ್ಷತೆಯನ್ನು ಬಜಿರೆ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಜಯಶಂಕರ ಹೆಗ್ಡೆ ವಹಿಸಿದ್ದರು.ವಲಯ ಮೇಲ್ವಿಚಾರಕಿ ಶಾಲಿನಿ, ಸೇವಾ ಪ್ರತಿನಿಧಿಗಳಾದ ರೂಪಾ, ಹೊಸಪಟ್ನ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ನಳಿನಿ ಹಾಜರಿದ್ದರು.