45 ಅಡಿ ಆಳದ ಬಾವಿಗೆ ಬಿದ್ದ ಹಾವು- ಉಜಿರೆ ಬೆಳಾಲು ಘಟಕದ ಸ್ನೇಕ್ ಅನಿಲ್ ರವರಿಂದ ಹಾವಿನ ರಕ್ಷಣೆ

0

ಬೆಳ್ತಂಗಡಿ: ಪುಂಜಾಲಕಟ್ಟೆ ಸಮೀಪದ ದೈಕಿನಕಟ್ಟೆಯ ಸೂರಜ್ ಕುಮಾರ್ ರವರ ಮನೆಯ ಸುಮಾರು 45 ಅಡಿ ಆಳದ ಬಾವಿಗೆ ನಾಲ್ಕೈದು ದಿನದ ಮೊದಲು ಹಾವೊಂದು ಬಿದ್ದಿತ್ತು.ಈ ಬಗ್ಗೆ ಪರಿಚಿತರು ಉಜಿರೆ ಬೆಳಾಲು ಘಟಕದ ಸ್ನೇಕ್ ಅನಿಲ್ ಚಾರ್ಮಾಡಿಯವರಿಗೆ ಮಾಹಿತಿ ನೀಡಿದ್ದರು.

ಹಾಗಾಗಿ ಜೂನ್ 06ರಂದು ಬೆಳಿಗ್ಗೆ ಸ್ನೇಕ್ ಅನಿಲ್ ಚಾರ್ಮಾಡಿ, ಸುಲೈಮಾನ್ ಬೆಳಾಲು ಹಾಗೂ ಸಚಿನ್ ಭಿಡೆಯವರು ಅಲ್ಲಿಗೆ ಹೋಗಿ ಹಾವನ್ನು ಬಾವಿಯಿಂದ ಮೇಲೆ ತೆಗೆಯುವ ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಯಾದರು.

ತುಂಬಾ ಆಳದ ಬಾವಿಗೆ ಇಳಿದು ಹಾವು ಹಿಡಿಯುವವರು ಬೇರೆ ಯಾರೂ ಇಲ್ಲ. ಹಾಗಾಗಿ ಆಳವಾಗಿದ್ದ ಆ ಬಾವಿಯಲ್ಲಿ ಆಕ್ಸಿಜನ್ ಕೊರತೆ ಅಥವಾ ಅಪಾಯಕಾರಿ ಮೀಥೇನ್ ಅನಿಲ ಇಲ್ಲದಿರುವ ಬಗ್ಗೆ ಮೊದಲೇ ವೈಜ್ಞಾನಿಕ ರೀತಿಯಲ್ಲಿ ಕನ್ಫರ್ಮ್ ಮಾಡಿಕೊಂಡೇ ಬಾವಿಗೆ ಹಗ್ಗದ ಮೂಲಕ ಇಳಿಯುವ ವ್ಯವಸ್ಥೆ ಮಾಡಿದ್ದೆವು.

ಜೀವಂತವಾಗಿದ್ದ ಹಾವನ್ನು ಕಷ್ಟಪಟ್ಟು ಮೇಲೆ ತೆಗೆದು ಕಾಡಿಗೆ ಬಿಡಲಾಯಿತು. ಮನೆಯವರು ಶೌರ್ಯ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದರು.

p>

LEAVE A REPLY

Please enter your comment!
Please enter your name here