ನೀಟ್ ಫಲಿತಾಂಶದಲ್ಲಿ ರಾಷ್ಟ್ರಮಟ್ಟದಲ್ಲಿ ಅಮೋಘ ಸಾಧನೆ- ಪ್ರಜ್ವಲ್ ಹೆಚ್.ಎಂ. ಗೆ ಎಕ್ಸೆಲ್ ಕಾಲೇಜಿನ ವತಿಯಿಂದ ಭವ್ಯ ಮೆರವಣಿಗೆ ಗೌರವ

0

ಗುರುವಾಯನಕೆರೆ: ರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆಯಾದ ನೀಟ್ ಫಲಿತಾಂಶದಲ್ಲಿ ಗ್ರಾಮೀಣ ಪರಿಸರದ ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ್ ಹೆಚ್.ಎಂ. 720 ಅಂಕಗಳ ಪೈಕಿ 710 ಅಂಕಗಳನ್ನು ಗಳಿಸಿಕೊಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ಅಮೋಘ ಸಾಧನೆ ಮಾಡಿದ್ದು ಇವರಿಗೆ ಎಕ್ಸೆಲ್ ಕಾಲೇಜಿನಿಂದ ಬೆಳ್ತಂಗಡಿಯವರೆಗೆ ಭವ್ಯ ಮೆರವಣಿಗೆಯ ಮೂಲಕ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಎಕ್ಸೆಲ್‌ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು ಡಾ. ನವೀನ್ ಕುಮಾರ್ ಮರಿಕೆ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here