

ಪೆರಿಂಜೆ: ಪೆರಿಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದ ಶಶಿಪ್ರಭಾ ಬಿ. ಮೇ 31ರಂದು ಸೇವಾ ನಿವೃತ್ತರಾದರು.
ಮೂಡುಬಿದಿರೆ ವಾಲ್ಪಾಡಿ ಹೆಗ್ಡೆ ಕೆ.ಧರ್ಣಪ್ಪ ಹೆಗ್ಡೆ ಹಾಗೂ ಕಮಲ ಹೆಗ್ಡೆ ದಂಪತಿಗಳ ಪುತ್ರಿಯಾದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಬಜಿರೆ ಹಾಗೂ ಅ.ಹಿ.ಪ್ರಾ.ಶಾಲೆ ವಿದ್ಯೋದಯ ವೇಣೂರು ಇಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ವೇಣೂರು ಇಲ್ಲಿ ಪೂರೈಸಿ, ಶಿಕ್ಷಕ ತರಬೇತಿಯನ್ನು ರೋಸಾ ಮಿಸ್ತಿಕಾ ತರಬೇತಿ ಸಂಸ್ಥೆ ಕಿನ್ನಿಕಂಬಳ ಗುರುಪುರದಲ್ಲಿ ಪೂರೈಸಿ ಹಿಂದಿಯಲ್ಲಿ ಭಾಷಾ ಪ್ರವೀಣ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದರು.
1996 ರಲ್ಲಿ ಸ.ಹಿ.ಪ್ರಾ.ಶಾಲೆ ಬಜಿರೆ ಇಲ್ಲಿ ಸೇವೆಗೆ ಸೇರಿದರು. ನಂತರ 2003 ರಲ್ಲಿಪೆರಿಂಜೆ ಸ.ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು ಸೇವೆಯಿಂದ ನಿವೃತ್ತರಾದರು ಇವರು ಪ್ರಸ್ತುತ ಮೂಡುಬಿದಿರೆಯ ಭೂಮಿಕಾದಲ್ಲಿ ಪತಿ ನಿವೃತ್ತ ಶಿಕ್ಷಕರಾದ ಸಿ. ಶೇಖರ ಹೆಗ್ಡೆ, ಮಗ ಉದ್ಯಮಿ ಮನೋಜ್ ಹೆಗ್ಡೆ, ಸೊಸೆ ಅಕ್ಷತಾ ಹೆಗ್ಡೆ, ಮೊಮ್ಮಕ್ಕಳಾದ ಸತ್ಕ್ರತಿ ಹಾಗೂ ಸ್ತವ್ಯ ರೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ.