

ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ಸಂಘದ ನೂತನ ಕಛೇರಿಯ ಉದ್ಘಾಟನೆಯನ್ನು ಸಂಘದ ಅಧ್ಯಕ್ಷ ಕೆ.ಡಿ ಜೋಸೆಫ್ ರವರು ಉದ್ಘಾಟಿಸಿದರು.
ನಂತರ ಇವರ ಅಧ್ಯಕ್ಷತೆಯಲ್ಲಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು.

ಸಂಘ ಮತ್ತು ನಮ್ಮ ಸದಸ್ಯರು ಉತ್ತಮ ರೀತಿಯಲ್ಲಿ ಸಂಘದ ಚಟುವಟಿಕೆಯಲ್ಲಿ ಸ್ಪಂಧಿಸುತ್ತಿದ್ದೂ ಸಂಘದ ಮಹತ್ತರ ಬೆಳವಣಿಗೆಗೆ ಸಾಕ್ಷಿಯಾಗಿದೆ.
ನಮ್ಮ ಕೆಲಸ ಕಾರ್ಯಗಳು ಮುಂದೆ ಇನ್ನೂ ಉತ್ತಮವಾಗಿ ನಡೆಸಲು ನಿಮ್ಮ ಸಹಕಾರ ಅಗತ್ಯ ಎಂದರು.ವೇದಿಕೆಯಲ್ಲಿ ಸಂಘದ ಗೌರವಧ್ಯಕ್ಷ ಪಿ.ಟಿ ಸಬಾಸ್ಟಿನ್, ಉಪಾಧ್ಯಕ್ಷ ಶಾಜಿ ತೋಮಸ್, ಕಾರ್ಯದರ್ಶಿ ತೋಮಸ್ ಪಿ.ಡಿ, ಕೋಶಧಿಕಾರಿ ಮ್ಯಾತ್ಯು ಕೆ.ಕೆ ಉಪಸ್ಥಿತರಿದ್ದರು.
ಪಿ.ಟಿ ಸಬಾಸ್ಟಿನ್ ಸ್ವಾಗತಿಸಿ, ಪಿ.ಡಿ ತೋಮಸ್ ವಾರ್ಷಿಕ ವರದಿ ವಾಚಿಸಿ, ಶಾಜಿ ತೋಮಸ್ ಧನ್ಯವಾದಗೈದರು.