

ಶಿಶಿಲ: ಶಿಶಿಲ ಗ್ರಾಮದ ನಾಗನಡ್ಕದ ಕೃಷ್ಣೇಗೌಡರು ಇಂದು(ಮೇ 27ರಂದು) ನಿಧನರಾಗಿದ್ದಾರೆ.

ಮೃತರಿಗೆ ಮಗ ಬಿಟ್ಟು ಯಾರು ಇಲ್ಲದ ಸಂದರ್ಭದಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಿಸಲು ಅರಸಿನಮಕ್ಕಿ ಶಿಶಿಲದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಹಾಯ ಯಾಚಿಸಿದರು. ಶೌರ್ಯ ವಿಪತ್ತು ತಂಡದವರು ಮೃತರ ಅಂತ್ಯಕ್ರಿಯೆಯನ್ನು ಉಜಿರೆಯ ರುದ್ರ ಭೂಮಿಯಲ್ಲಿ ನೆರವೇರಿಸಿದರು.

ವಲಯ ಮೇಲ್ವಿಚಾರಕಿ ಶಶಿಕಲ, ಸೇವಾ ಪ್ರತಿನಿಧಿ ಗಾಯತ್ರಿ, ಸಂಯೋಜಕಿ ಸೇವಾಪ್ರತಿನಿಧಿ ರಶ್ಮಿತಾ, ಶೌರ್ಯ ಸದಸ್ಯರುಗಳಾದ ಪ್ರವೀಣ ಪತ್ತಿಮಾರು, ಗಂಗಾಧರ ಶಿಶಿಲ, ರಾಧಕೃಷ್ಣ ಗುತ್ತು, ಕಿರಣ್ ಸಂಕೇಶ,
ರಮೇಶ ಬೈರಕಟ್ಟ, ಅವಿನಾಶ್ ಭಿಡೆ, ಕುಶಾಲಪ್ಪ ಗೌಡ , ಸಚಿನ್ ಭಿಡೆ ಭಾಗವಹಿಸಿದರು.