ಖ್ಯಾತ ಮೇಸ್ತ್ರಿ ಕೆಲಸಗಾರ ಮೊಯಿದಿನ್‌ಕುಂಞಿ ಮೋಣುಚ್ಚ ನಿಧನ

0

ಬೆಳ್ತಂಗಡಿ: ಕಕ್ಕಿಂಜೆ ಸನಿಹದ ಚಿಬಿದ್ರೆ ನಿವಾಸಿ, ಖ್ಯಾತ ಮೇಸ್ತ್ರಿ ಕೆಲಸಗಾರ ಮೊಯಿದಿನ್‌ಕುಂಞಿ ಮೋಣುಚ್ಚ (65 ವ) ಅವರು ಅಲ್ಪಕಾಲದ ಅಸೌಖ್ಯದಿಂದ ಮೇ. 24ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಸರಳ ಸಜ್ಜನಿಕೆಯವರಾಗಿದ್ದ ಅವರು ಹಲವು ಯುವಕರಿಗೆ ವೃತ್ತಿ ಕಲಿಸಿ ಸ್ವತಂತ್ರರಾಗುವಂತೆ ಮಾಡಿದ್ದರು. ಹಾಗೂ ಹಲವರಿಗೆ ಸ್ವ-ಉದ್ಯೋಗಾವಕಾಶವನ್ನೂ ಕಲ್ಪಿಸಿಕೊಟ್ಟಿದ್ದರು.

ಮೃತರು ಪತ್ನಿ ಮರಿಯಮ್ಮ, ಇಬ್ಬರು ಪುತ್ರರಾದ ರಿಯಾಝ್ ಮತ್ತು ರಫೀಕ್, ಮೂವರು ಪುತ್ರಿಯರಾದ ರಶೀದಾ, ರೈನಾಝ್ ಮತ್ತು ರಾಯಿಫಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ವಿಧಿ ಕಕ್ಕಿಂಜೆ ದಫನ ಭೂಮಿಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here