ಕಳೆಂಜ: ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜದಲ್ಲಿ ಜೇಸಿಐ ಕೊಕ್ಕಡ ಕಪಿಲಾ ಇದರ ಆಶ್ರಯದಲ್ಲಿ “ಚಿಣ್ಣರ ಲೋಕ -2024 ” ಶಿಬಿರವನ್ನು ಮೇ 25 ಮತ್ತು 26ರಂದು ಆಯೋಜಿಸಲಾಗಿದೆ.
ಜೇಸಿಐ ಕೊಕ್ಕಡ ಕಪಿಲಾ ಮತ್ತು ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜ ಇದರ ನೇತೃತ್ವದಲ್ಲಿ ಪ್ರಪ್ರಥಮ ಬೇಸಿಗೆ ಶಿಬಿರ “ಚಿಣ್ಣರ ಲೋಕ -2024″ನ್ನು ಮೇ 25 ಮತ್ತು 26ರಂದು ನಡೆಯಲಿದೆ.
ಈ ಶಿಬಿರದಲ್ಲಿ ಮಕ್ಕಳ ದೈನೆಂದಿನ ಕಲಿಕೆಯ ಬದಲಾಗಿ ಬೇರೆಯದೇ ರೀತಿಯ ಶಿಕ್ಷಣ ನೀಡಲಾಗುತ್ತದೆ. ಈ ಶಿಬಿರ ಮಕ್ಕಳ ಬೇಸಿಗೆಯ ಅಮೂಲ್ಯ ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಮತ್ತು ಮಕ್ಕಳ ಕಲಿಕೆಗೆ ಪ್ರೇರಣೆ ಮತ್ತು ಪೂರಕವಾಗುವ ಉದ್ದೇಶದಿಂದ ಶಿಬಿರದಲ್ಲಿ ಕ್ರಾಪ್ಟ್, ಮನಸ್ಸನ್ನು ವೃದ್ಧಿಸುವ ಮೈಂಡ್ ಗೇಮ್, ಭಾಷಣ ಕಲೆ, ಸಂಸ್ಕೃತಿಯ ಪರಿಚಯ, ಜಾನಪದ ಹಾಡು ಹಾಗು ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವಿಕೆ ಇತ್ಯಾದಿಗಳನ್ನು ಒಳಗೊಂಡಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಚಂಪಾ ಜೈನ್, ಸನ್ಮತಿ ನಿಲಯ ಉಜಿರೆ, ಗಂಗಾಧರ ಬಂಡಾರಿ ಕಾಯರ್ತಡ್ಕ, ಚೇತನಾ ಎಮ್, ಶಿಕ್ಷಣ ಸಂಯೋಜಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ತಂಗಡಿ ಮತ್ತು ರಾಜಾರಾಮ್ ಟಿ, ಸಂಗಮನಗರ ಇವರಿಂದ ತರಬೇತಿ ನಡೆಯಲಿದೆ.
ಶಿಬಿರದ ಉದ್ಘಾಟನೆಯನ್ನು ಜೆಸಿ ಭಾರತ್ ಶೆಟ್ಟಿ ಝೋನ್ ಡೈರೆಕ್ಟರ್ ಕಮ್ಯೂನಿಟಿ ಡೆವೆಲಪ್ ಮೆಂಟ್ ಝೋನ್-15 ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜೆಸಿ ಹೆಚ್ ಜಿ ಎಫ್ ಜೋಸೆಫ್ ಪಿರೇರಾ ಮಾರ್ಗದರ್ಶಕರು, ಜೆಸಿಐ ಕೊಕ್ಕಡ ಕಪಿಲಾ ಮತ್ತು, ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಕಾರ್ಯದರ್ಶಿ ಕುಸುಮಾಕರ ಇವರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೆಸಿ ಅಶೋಕ್ ಗುಂಡ್ಯಾಲಿಕೆ, ZD National program Zone -15 JCI India ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ JFM ಶ್ರೀಧರ್ ರಾವ್, ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷರು ಹಾಗು ಪದಾಧಿಕಾರಿಗಳು, JC HGF ಸಂತೋಷ್ ಜೈನ್ ಅಧ್ಯಕ್ಷರು ಜೇಸಿಐ ಕೊಕ್ಕಡ ಕಪಿಲಾ, ಜೆಸಿ ಅಕ್ಷತ್ ರೈ ಕಾರ್ಯದರ್ಶಿ, JCI Sen. ಜಿತೇಶ್ ಎಲ್ ಪಿರೇರಾ ನಿಕಟಪೂರ್ವಾಧ್ಯಕ್ಷ, ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ಶೋಭಾ ಪಿ, ಹರ್ಷಿತ್ JJC ಅಧ್ಯಕ್ಷರು, JCLT ವಿವಿಯನ್ ಸುವಾರಿಸ್, JCLT ಅಧ್ಯಕ್ಷರು ಹಾಗು ಸರ್ವಸದಸ್ಯರು ಇವರ ಮಾರ್ಗದರ್ಶನದಲ್ಲಿ ತರಬೇತಿ ನಡೆಯಲಿದೆ.