ಗುರುವಾಯನಕೆರೆ: ಸಾರಸ್ವತ ಲೋಕದಲ್ಲಿ ನಾಡು ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮೇ.22ರಂದು ಎಕ್ಸೆಲ್ ವಿದ್ಯಾಸಂಸ್ಥೆಯು ಅಕ್ಷರೋತ್ಸವ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಯಿತು.
ನಾನಾ ಪ್ರದೇಶದಿಂದ ಉದಯೋನ್ಮುಖ ಕವಿ ಕವಯಿತ್ರಿಯರು ಭಾಗವಹಿಸುವುದರಿಂದ. “ಮನುಜ ಕುಲ ತಾನೊಂದೆ ವಲಂ” ಎಂಬ ಮಹಾಕವಿ ಪಂಪನ ಕಾವ್ಯೋಕ್ತಿಯ ಪರಿಕಲ್ಪನೆಯಡಿಯಲ್ಲಿ ಮೂಡಿಬಂದ ಈ ಕಾರ್ಯಕ್ರಮವನ್ನು ಖ್ಯಾತ ಸಾಹಿತಿಗಳಾದ ಡಾ.ನರಹಳ್ಳಿ ಬಾಲಸುಬ್ರಮಣ್ಯರವರು ಉದ್ಘಾಟಿಸಿದರು.
ಎಕ್ಸೆಲ್ ಸಂಸ್ಥೆಗಳ ಅಧ್ಯಕ್ಷರು ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು.
ನಾಡಿನ ಖ್ಯಾತ ಗಣಿತ ತಜ್ಞ ಹಾಗೂ ಎಕ್ಸೆಲ್ ಸಂಸ್ಥೆಯ ಕಾರ್ಯದರ್ಶಿಗಳು ಮತ್ತು ಪ್ರಾಧ್ಯಾಪಕರಾಗಿರುವ ಅಭಿರಾಮ್ ಬಿ.ಎಸ್ ರವರ “ಅಚೀವರ್ಸ್ ಮ್ಯಾಥಮೆಟಿಕ್ಸ್” ಪಠ್ಯ ಪುಸ್ತಕದ ಲೋಕಾರ್ಪಣೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಶ್ರೀನಾಥ್ ಎಂ.ಪಿ, ಎಕ್ಸೆಲ್ ವಿದ್ಯಾ ಸಂಸ್ಥೆಯ ಪ್ರಾಧ್ಯಾಪಕ ಪ್ರಭಾಕರ್ ಬರೆದ “ಕಂಪ್ಯೂಟರ್ ಸೈನ್ಸ್ ಸ್ಕ್ಯಾನರ್” ಪಠ್ಯಪುಸ್ತಕದ ಲೋಕಾರ್ಪಣೆಯನ್ನು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ ನೆರವೇರಿಸಿದರು.
ಇದರೊಂದಿಗೆ ನೂರಕ್ಕೂ ಹೆಚ್ಚಿನ ಉದಯೋನ್ಮುಖ ಕವಿ-ಕವಯಿತ್ರಿಯರ ರಚನಾತ್ಮಕ ಕವನಗಳನ್ನೊಳಗೊಂಡ ಕವಿತೆಗಳ ಸಂಗ್ರಹಾತ್ಮಕ ಪುಸ್ತಕವಾದ ‘ಅಕ್ಕರೆಯ ಕವಿತೆಗಳು’ ಕೃತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ.ಸುಬ್ಬಣ್ಣ ರೈ ನೆರವೇರಿಸಿ ಶುಭ ಹಾರೈಸಿದರು.
ಕಾಲೇಜು ಪ್ರಾಂಶುಪಾಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಎಕ್ಸೆಲ್ ಸಂಸ್ಥೆಗಳ ಕಾರ್ಯದರ್ಶಿ ಅಭಿರಾಮ್ ವಂದಿಸಿದರು.ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.