

ಶಿಬಾಜೆ: ಇಲ್ಲಿಯ ಐಂಗುಡ ನಿವಾಸಿ ವಾಸು ರಾಣ್ಯ(83 ವ) ಮೇ 21ರಂದು ನಾಪತ್ತೆಯಾಗಿದ್ದಾರೆ.
ಕಾಡಿಗೆ ಕಟ್ಟಿಗೆ ತರಲೆಂದು ಹೋದವರು ಮನೆಗೆ ಹಿಂತಿರುಗಿ ಬಾರದೆ ಇರುವ ಕಾರಣ ಮನೆಯವರು ಆತಂಕಗೊಂಡಿದ್ದು, ಸುತ್ತಮುತ್ತಲಿನವರಿಗೆ ವಿಷಯ ತಿಳಿಸಿದ ಬಳಿಕ ಶೌರ್ಯ ವಿಪತ್ತು ತಂಡ ಶೋಧ ಕಾರ್ಯ ಆರಂಭಿಸಿದೆ. ಇದುವರೆಗೆ ಅವರ ಸುಳಿವು ಲಭಿಸಿಲ್ಲ.
ಧರ್ಮಸ್ಥಳ ಪೊಲೀಸ್ ಠಾಣೆಗೆ ನಾಪತ್ತೆ ಕುರಿತು ದೂರು ನೀಡಲಾಗಿದೆ.