ಶಾಸಕ ಹರೀಶ್ ಪೂಂಜ ಪೊಲೀಸ್ ಠಾಣೆಗೆ ನುಗ್ಗಿ ಗೂಂಡಾಗಿರಿ ಮಾಡಿದ್ದು ಅಕ್ಷಮ್ಯ- ರಕ್ಷಿತ್ ಶಿವರಾಂ

0

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜರವರು ಪೊಲೀಸ್ ಠಾಣೆಗೆ ನುಗ್ಗಿ ಗೂಂಡಾಗಿರಿ ಮಾಡಿದ್ದು ಅಕ್ಷಮ್ಯವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿಕೆ ನೀಡಿದ್ದಾರೆ. ಶಾಸಕ ಪೂಂಜರವರು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಪೊಲೀಸ್ ಠಾಣೆಗೆ ಹೋಗಿಲ್ಲ.

ಬದಲಾಗಿ ಸ್ಫೋಟಕ ಕಾಯಿದೆಯಡಿ ಅಕ್ರಮ ಸ್ಫೋಟಕ ಶೇಖರಣೆ ಮಾಡಿರುವ ಆರೋಪ ಮತ್ತು ಅಕ್ರಮ ಗಣಿಗಾರಿಕೆ ಮಾಡುತ್ತಿರುವ ಒಬ್ಬ ರೌಡಿ ಶೀಟರ್‌ನ ಪರ ಹೋಗಿದ್ದಾರೆ ಇದು ಬಿಜೆಪಿ ಸಂಸ್ಕೃತಿಯೇ ಎಂದು ಪ್ರಶ್ನಿಸಿರುವ ರಕ್ಷಿತ್ ಶಿವರಾಂ ಅವರು ಅಕ್ರಮ ಕಪ್ಪುಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದ ಬಿಜೆಪಿ ಯುವ ಮೋರ್ಛಾದ ನಾಯಕರ ವಿರುದ್ಧ ಸ್ಪೋಟಕ ಕಾಯ್ದೆಯಡಿ ಪ್ರಕರಣದಲ್ಲಿ ಬಂಧಿಸಲ್ಪಟ್ಟ ರೌಡಿ ಶೀಟರ್‌ನನ್ನು ಬಲಾತ್ಕಾರವಾಗಿ ಬಿಡಿಸಲು ಮಧ್ಯ ರಾತ್ರಿ ಠಾಣೆಗೆ ಬಂದು ಅಧಿಕಾರಿಗಳಿಗೆ ನಿಂದನೆ ಮಾಡಿ ಗೂಂಡಾಗಿರಿ ನಡೆಸಿದ ಶಾಸಕರಿಗೂ, ರೌಡಿ ಶೀಟರ್‌ಗೂ ಯಾವುದೇ ವ್ಯತ್ಯಾಸ ಇಲ್ಲ.

ತಾಲೂಕಿನ ಅಭಿವೃದ್ಧಿಯೆಂದರೆ ಅಕ್ರಮ ಮರಳು, ಮರ, ಕಪ್ಪುಕಲ್ಲು ಗಣಿಗಾರಿಕೆಯ ದಂಧೆ ಎಂದುಕೊಂಡಿದ್ದಾರೆಯೇ? ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ಬದಲಾಗಿ ರೌಡಿಗಳು, ಅಕ್ರಮ ದಂಧೆಕೋರರ ಪರವಾಗಿ ವಕಾಲತ್ತು ನಡೆಸುವ ಮೂಲಕ ತನ್ನ ನೈಜ ಬಣ್ಣವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.

ಶಾಸಕರು ಒಮ್ಮೆಯಾದರೂ ಜನಸಾಮಾನ್ಯರ ಪರವಾಗಿ ಪೊಲೀಸ್ ಠಾಣೆಗೆ ಹೋಗಿರುವ ಒಂದೇ ಒಂದು ಉದಾಹರಣೆ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಶಾಸಕ ಹರೀಶ್ ಪೂಂಜರವರು ಸರ್ಕಾರಿ ಅಧಿಕಾರಿಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುವ ಮೂಲಕ ಸಂವಿಧಾನದ ಕಗ್ಗೊಲೆ ಮಾಡಿದ್ದಾರೆ.

ಪೊಲಿಸ್ ಅಧಿಕಾರಿಗಳಿಗೆ ಅಸಂವಿಧಾನಿಕ ಪದ ಬಳಕೆ ಮಾಡಿ ಪೋಲಿಸರ ಘನತೆ, ಗೌರವಕ್ಕೆ ಧಕ್ಕೆ ಉಂಟು ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸುವ ಮೂಲಕ ಅಕ್ರಮ ದಂಧೆಕೋರರಿಗೆ ಬೆಂಬಲ ನೀಡಿದ್ದು ಶಾಸಕತ್ವಕ್ಕೆ ಇರುವ ಮಾನ, ಮರ್ಯಾದೆಯನ್ನು ಕಳೆದಿದ್ದಾರೆ. ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಗೂಂಡಾಗಿರಿಗೆ, ಅಕ್ರಮ ದಂಧೆಕೋರರಿಗೆ ಅವಕಾಶ ನೀಡುವುದಿಲ್ಲ. ಅಂತಹುದನ್ನು ಮಟ್ಟ ಹಾಕುತ್ತೇವೆ ಎಂದು ರಕ್ಷಿತ್ ಶಿವರಾಂ ಹೇಳಿಕೆ ನೀಡಿದ್ದಾರೆ.

p>

LEAVE A REPLY

Please enter your comment!
Please enter your name here