ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್, ತೋಟತ್ತಾಡಿ ಚೈತನ್ಯ ಮಹಾಸಂಘ ಸಹಕಾರದಿಂದ ಮಹಾಸಭೆ- ಮಹಿಳಾ ಆರೋಗ್ಯದ ಬಗ್ಗೆ ತರಬೇತಿ ಕಾರ್ಯಕ್ರಮ

0

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ ಹಾಗೂ ತೋಟತ್ತಾಡಿ ಚೈತನ್ಯ ಮಹಾಸಂಘ ಸಹಕಾರದಿಂದ ಮಹಾಸಭೆ ಹಾಗೂ ಮಹಿಳಾ ಆರೋಗ್ಯದ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ತೋಟತ್ತಾಡಿ ಸಂತ ಅಂತೋನಿ ದೇವಾಲಯ ಮೇ 10ರಂದು ಆಯೋಜಿಸಿಲಾಗಿತ್ತು.

ಮಹಾಸಂಘ ಅಧ್ಯಕ್ಷೆ ಫಿಲೋಮಿನಾ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಅತಿಥಿಗಳಾಗಿ ಸಂತ ಅಂತೋನಿ ದೇವಾಲಯದ ಧರ್ಮಗುರು ವಂ.ಫಾ.ಜೋಸ್ ಪೂವತ್ತಿಂಗಲ್ ರವರು ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಲಾಯಿಲ ಜ್ಯೋತಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಿಸ್ಟರ್ ಆನ್ ಗ್ರೇಸ್, ಇವರು ಮಹಿಳೆಯರ ಆರೋಗ್ಯದ ಬಗ್ಗೆ ತರಬೇತಿ ನೀಡಿದರು.ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ವಂ.ಫಾ.ಬಿನೋಯಿ ಎ.ಜೆ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಹಿಳಾ ಸಂಯೋಜಕಿ ಸಿಸಿಲ್ಯಾ ತಾವ್ರೊರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಾಸಂಘ ಕಾರ್ಯದರ್ಶಿ ಜಿಶಾ ಎಲ್ಲರನ್ನು ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಜೆಸ್ಸಿ ವಂದಿಸಿದರು. ಒಕ್ಕೂಟ ಕಾರ್ಯಕಾರಿ ಸಮಿತಿ ಸದಸ್ಯೆ ಜಿನ್ಸಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here