

ಕಣಿಯೂರು: 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪದ್ಮುಂಜ ಸರಕಾರಿ ಪ್ರೌಢಶಾಲೆಯು ಶೇ.100 ಫಲಿತಾಂಶ ಸಾಧಿಸಿದೆ.
ಪರೀಕ್ಷೆಗೆ ಹಾಜರಾದ 29 ವಿದ್ಯಾರ್ಥಿಗಳ ಉತ್ತೀರ್ಣರಾಗಿದ್ದು, ಇವರ ಪೈಕಿ ನಿಶ್ಮಿತಾ 535 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಮಹಮ್ಮದ್ ಅಫ್ರದ್ 512, ಸುಪ್ರಭ.ಕೆ 504, ಶಿವಪ್ರಸಾದ್ 489, ಮೋಕ್ಷಿತ್ ಶೆಟ್ಟಿ. ಪಿ. 486, ಅಂಕಗಳನ್ನು ಗಳಿಸಿದ್ದು, 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿವೃಂದ ಅಭಿನಂದನೆ ಸಲ್ಲಿಸಿದ್ದು, ಸತತ ಎರಡನೇ ಬಾರಿಗೆ ಶೇ.100 ಫಲಿತಾಂಶ ಪಡೆದ ಹೆಗ್ಗಳಿಕೆ ಶಾಲೆಯದ್ದು.