ಗುರುವಾಯನಕೆರೆ: ವಿದ್ವತ್ ಪಿ.ಯು ಕಾಲೇಜಿನಲ್ಲಿ ರಾಜ್ಯದ ದ್ವಿತೀಯ ಟಾಪರ್ ಚಿನ್ಮಯ್ ಜಿ.ಕೆ ಗೆ ಸನ್ಮಾನ

0

ಗುರುವಾಯನಕೆರೆ: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅತಿ ಹೆಚ್ಚು ಅಂಕಗಳಿಸಿ, ರಾಜ್ಯಕ್ಕೆ 2ನೇ ರ‍್ಯಾಂಕ್ ಗಳಿಸಿರುವ ಬೆಳ್ತಂಗಡಿಯ ಪ್ರತಿಭಾನ್ವಿತ ವಿದ್ಯಾರ್ಥಿ ಚಿನ್ಮಯ್ ಜಿ.ಕೆಯನ್ನು ವಿದ್ವತ್ ಪದವಿಪೂರ್ವ ಕಾಲೇಜಿನಲ್ಲಿ ಮೇ.09ರಂದು ಸನ್ಮಾನಿಸಲಾಯಿತು.

ಚಿನ್ಮಯ್ ಜಿ.ಕೆಯ ತಂದೆ ಬೆಳ್ತಂಗಡಿ ಸರಕಾರಿ ಪ.ಪೂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಗಣೇಶ್ ಭಟ್ ರವರು ಈ ಸಂದರ್ಭದಲ್ಲಿ ಹಾಜರಿದ್ದು, ಮಗನ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಚಿನ್ಮಯ್ ಜಿ.ಕೆ 625ಕ್ಕೆ 624 ಅಂಕ ಗಳಿಸಿದ್ದು, ಈ ಅಮೋಘ ಸಾಧನೆ ಮಾಡಿದ ರಾಜ್ಯದ ಏಳೇ ಏಳು ಪ್ರತಿಭಾವಂತರಲ್ಲಿ ಒಬ್ಬನಾಗಿದ್ದಾನೆ, ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಾಧನೆ ಗೈದಿದ್ದಾರೆ.

ಚಿನ್ಮಯ್ ಜಿ.ಕೆ ಪ್ರಸ್ತುತ ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ವತ್ ಪ್ರೇರಣಾ ಫೌಂಡೇಶನ್ ಕೋಚಿಂಗ್ ಪಡೆದುಕೊಳ್ಳುತ್ತಿದ್ದು, ಅಲ್ಲಿನ ಎಕ್ಸ್‌ಪರ್ಟೈಜ್ ಟೆಸ್ಟ್‌ಗಳಲ್ಲಿಯೂ ನಿರಂತರವಾಗಿ “ಸ್ಟಾರ್ ಪರ್ಫಾರ್ಮರ್” ಆಗಿ ಹೊರಹೊಮ್ಮಿರುವುದು ವಿಶೇಷ.

ಚಿನ್ಮಯ್ ಜಿ.ಕೆ ಜೆ.ಇ.ಇ ಅಡ್ವಾನ್ಸ್ಡ್ ನಲ್ಲಿ ಅರ್ಹತೆ ಗಿಟ್ಟಿಸಿಕೊಂಟು ಐ.ಐ.ಟಿ. ಗೆ ಪ್ರವೇಶ ಪಡೆಯುವ ಮಹತ್ವಾಕಾಂಕ್ಷೆ ಹೊಂದಿದ್ದಾನೆ. ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಖಜಾಂಜಿ ಶ್ರೀ ಎಂ.ಕೆ ಕಾಶಿನಾಥ್ ರವರು ಪ್ರತಿಭಾನ್ವಿತ ವಿದ್ಯಾರ್ಥಿ ಚಿನ್ಮಯ್ ಜಿ.ಕೆ ಯೊಂದಿಗೆ ವಿದ್ವತ್ ಪ್ರೇರಣಾ ಫೌಂಡೇಶನ್ ಕೋಚಿಂಗ್ ವಿದ್ಯಾರ್ಥಿಗಳಾದ 617 ಅಂಕಗಳಿಸಿದ ಅಜಿತ್ ಎಚ್.ಸಿ, 613 ಅಂಕಗಳಿಸಿರುವ ಸಿಮ್ರಾ ಪರ್ವೀನ್, 602 ಅಂಕ ಗಳಿಸಿರುವ ದ್ರವೀಣ್ ಭಟ್, ಹಾಗೂ 597 ಅಂಕಗಳಿಸಿರುವ ಯಶಸ್ವಿನಿ ಜೆ.ಬಿ ಯವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here