ವೇಣೂರು: ಎಸ್.ಡಿ.ಎಂ ಐಟಿಐಯಲ್ಲಿ ಕ್ಯಾಂಪಸ್ ಸಂದರ್ಶನ

0

ವೇಣೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2024 ನೇ ಸಾಲಿನ ನೇಮಕಾತಿ ಪ್ರಕ್ರಿಯೆಗಳ ಉದ್ಘಾಟನಾ ಸಮಾರಂಭ ಮೇ.6ರಂದು ನಡೆಯಿತು.

ಹುಂಡೈ ಕಂಪನಿಯ ಜನರಲ್ ಮ್ಯಾನೇಜರ್ (ಸರ್ವಿಸ್) ಆನಂದ್ ರವರು ದೀಪ ಪ್ರಜ್ವಲ್ವನೆಯ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ, ವೇಣೂರು ಐಟಿಐಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ದೇಶ ವಿದೇಶಗಳಲ್ಲಿ ಬೇಡಿಕೆ ಇದೆ ಎಂದು ಹೇಳಿದರು.

ಶಿಸ್ತು ಮತ್ತು ಸಮಯ ಪಾಲನೆ ಮೈಗೂಡಿಸಿಕೊಂಡಿರುವ ಸಂಸ್ಥೆಯ ವಿದ್ಯಾರ್ಥಿಗಳು ಹುಂಡೈ ಕಂಪನಿಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ಹೇಳಿದರು.

ಸಂಸ್ಥೆಯ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಕೆಆರ್ ಅವರು ಸ್ವಾಗತಿಸಿ, ಪ್ರಾಸ್ತವಿಕ ನುಡಿಗಳನ್ನು ಆಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಹುಂಡೈ ಕಂಪನಿಯ ತರಬೇತಿ ಮುಖ್ಯಸ್ಥ ಅರುಣ್ ಹಾಗೂ ತರಬೇತುದಾರ ಕಾರ್ತಿಕ್ ಅವರು ಉಪಸ್ಥಿತರಿದ್ದರು.

ಸಂದರ್ಶನದಲ್ಲಿ ವಿವಿಧ ಐಟಿಐಗಳ 140 ವಿದ್ಯಾರ್ಥಿಗಳು ಭಾಗವಹಿಸಿದರು.ಕಿರಿಯ ತರಬೇತಿ ಅಧಿಕಾರಿ ಸತೀಶ್ ಕಾರ್ಯಕ್ರಮ ನಿರ್ವಹಿಸಿ, ವಿದ್ಯಾರ್ಥಿ ಪ್ರಶ್ಮಿತ್ ಪ್ರಾರ್ಥನೆಗೈದರೆ, ಶ್ರೀ ಕೃಷ್ಣ ಕಿರಿಯ ತರಬೇತಿ ಅಧಿಕಾರಿ ಶ್ರೀಧರ ಡಿ. ವಂದಿಸಿದರು.

p>

LEAVE A REPLY

Please enter your comment!
Please enter your name here