ತೋಟದ ಕೆರೆಯಲ್ಲಿ ಬೃಹತ್ ಗಾತ್ರದ ಕಾಡು ಕೋಣದ ಮೃತದೇಹ ಪತ್ತೆ-ಶೌರ್ಯ ವಿಪತ್ತು ತಂಡದಿಂದ ಮೇಲೆತ್ತುವ ಕಾರ್ಯಾಚರಣೆ

0

ಬೆಳ್ತಂಗಡಿ: ಬೆಳಾಲು ಗ್ರಾಮಕ್ಕೆ ಸಂಬಂಧಪಟ್ಟಂತೆ ಕೊಯ್ಯೂರು ರಸ್ತೆಯ ಬದ್ಯಾರು ಎಂಬಲ್ಲಿ ಹೆಚ್ ಪದ್ಮ‌ಗೌಡ ಎಂಬವರ ತೋಟದ ಕೆರೆಯಲ್ಲಿ ಬೃಹತ್ ಗಾತ್ರದ ಕಾಡುಕೋಣದ ಮೃತದೇಹ ಪತ್ತೆಯಾಗಿದೆ.

ಈ ಕೆರೆಗೆ ಸುತ್ತ ಕಾಂಕ್ರೀಟ್ ರಿಂಗ್ ಅಳವಡಿಸಿದ್ದು ನೀರು ಕುಡಿಯಲು ಬಂದ ಕಾಡುಕೋಣ ಮೂರ್ನಾಲ್ಕು ದಿನಗಳ ಹಿಂದೆಯೇ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ. ಹೆಚ್ಚೂ ಕಮ್ಮಿ 10 ಕ್ವಿಂಟಾಲ್ ತೂಕ ಹೊಂದಿರಬಹುದೆಂದು ಅಂದಾಜಿಸಲಾಗಿದ್ದು, ಕೊಳೆತು ವಾಸನೆ ಬೀರುತ್ತಿತ್ತು.

ಶೌರ್ಯ ವಿಪತ್ತು ತಂಡಕ್ಕೆ ಬಂದ ಮಾಹಿತಿಯಂತೆ ಉಜಿರೆ- ಬೆಳಾಲು ಘಟಕದ ಸಂಯೋಜಕ ಸುಲೈಮಾನ್ ಬೆಳಾಲು, ಮುಳುಗು ಪರಿಣತಹರೀಶ ಕೂಡಿಗೆ, ಮುಹಮ್ಮದ್ ಶರೀಫ್ ಬೆಳಾಲು, ಅವಿನಾಶ್ ಭಿಡೆ ಅರಸಿನಮಕ್ಕಿ, ರವೀಂದ್ರ ಉಜಿರೆ, ಸುರೇಂದ್ರ ಉಜಿರೆ, ಅನಿಲ್ ಚಾರ್ಮಾಡಿ, ಶೌರ್ಯ ಘಟಕದ ಮಾಸ್ಟರ್ ಪ್ರಕಾಶ್ ಧರ್ಮಸ್ಥಳ, ನಳಿನ್ ಕುಮಾರ್ ಧರ್ಮಸ್ಥಳ ಮೊದಲಾದವರು ಸಾರ್ವಜನಿಕರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಕಾಡುಕೋಣದ ಕಳೇಬರವನ್ನು ಮೇಲೆತ್ತಿದ್ದಾರೆ.

ಬಳಿಕ ಪಶುವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ಪ್ರಕ್ರೀಯೆ ನಡೆಸಿದ್ದು, ತೋಟದಲ್ಲೇ ಹೊಂಡ ತೋಡಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆಯಿಂದ ಭರತ್‌, ಪ್ರತಾಪ್, ಜಗದೀಶ್ ಮೊದಲಾದವರೂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here