ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರವರು ನಾರಾವಿ ಚೆಕ್ ಪೋಸ್ಟ್ ಹಾಗೂ ಎಳನೀರು, ಕಜಕ್ಕೆ ಮತಗಟ್ಟೆಗೆ ಭೇಟಿ

0

ಬೆಳ್ತಂಗಡಿ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಎ.18ರಂದು ನಾರಾವಿ ಚೆಕ್ ಪೋಸ್ಟ್ ಹಾಗೂ ಎಳನೀರು ಮತಗಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಳ್ತಂಗಡಿ ತಾಲೂಕಿನಲ್ಲಿ ನಾರಾವಿ ಮತ್ತು ಚಾರ್ಮಾಡಿಯಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ವಿಶೇಷ ಪೊಲೀಸ್ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಗಟ್ಟುವುದಕ್ಕಾಗಿ ತೆರೆದುಕೊಂಡಿರುವ ಈ ಚೆಕ್ ಪೋಸ್ಟ್ ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಂದ ಹೋಗುವ ಪ್ರತಿ ವಾಹನವನ್ನು ತಪಾಸಣೆ ನಡೆಸಿ ಮುಂದುವರಿಯಲು ಅವಕಾಶ ನೀಡಲಾಗುತ್ತದೆ. ನಾರಾವಿ ಚೆಕ್ ಪೋಸ್ಟ್ ನ ಕಾರ್ಯನಿರ್ವಹಣೆ ಕುರಿತು ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಜಿಲ್ಲಾ ಪೋಲಿಸ್ ಎಸ್ ಪಿ ರಿಷ್ಯಂತ್ ಸಿ.ಬಿ‌., ಪುತ್ತೂರು ಎಸಿ ಜುಬಿನ್ ಮೊಹಪಾತ್ರ, ಡಿವೈಎಸ್ ಪಿ ವಿಜಯ ಪ್ರಸಾದ್, ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಂ, ಬೆಳ್ತಂಗಡಿ ಪೊಲೀಸ್ ವೃತ ನಿರೀಕ್ಷಕರಾದ ಸುಬ್ಬಾಪುರ ಮಠ, ವಸಂತ ಆಚಾರ್, ಸಹಾಯಕ ಚುನಾವಣಾಧಿಕಾರಿ ಕೆಂಪೇಗೌಡ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಎಳನೀರು, ಕಜಕ್ಕೆ ಮತಗಟ್ಟೆಗೆ ಭೇಟಿ: ಜಿಲ್ಲಾಧಿಕಾರಿಯವರ ತಂಡ ಮಲವಂತಿಗೆ ಗ್ರಾಮದ ಎಳನೀರು, ಕಜಕ್ಕೆ ಮತಗಟ್ಟೆಗಳಿಗೆ ಭೇಟಿ ನೀಡಿ ಮತಗಟ್ಟೆಗಳ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿದರು.
ಬೆಳ್ತಂಗಡಿ ತಾಲೂಕಿನ ದುರ್ಗಮ ಮತಗಟ್ಟೆಗಳಲ್ಲಿ ಒಂದಾಗಿರುವ ಈ ಪ್ರದೇಶ ತಾಲೀಕು ಕೇಂದ್ರದಿಂದ ಹಾಗೂ ಪೊಲೀಸ್ ಠಾಣೆಯಿಂದ ಅತ್ಯಂತ ದೂರದಲ್ಲಿದೆ.

ದಿಡುಪೆ-ಸಂಸೆ ರಸ್ತೆಯ ಕನಸು ಇನ್ನೂ ಈಡೇರದ ಹಿನ್ನಲೆಯಲ್ಲಿ ಇಲ್ಲಿಗೆ ಬರಬೇಕಾದರೆ 120 ಕಿ.ಮೀ ಸುತ್ತಿ ಬಳಸಿ ಬರಬೇಕಾಗಿದೆ. ಈ ಹಿನ್ನಲೆಯಲ್ಲಿ ಇಲ್ಲಿನ ಸಿದ್ದತೆಗಳ ಬಗ್ಗೆ ಜಿಲ್ಲಾಧಿಕಾರಿಯವರು ಪರಿಶೀಲನೆ ನಡೆಸಿದರು ಅಲ್ಲಿರುವ ಮೊಬೈಲ್ ನೆಟ್ವರ್ಕ್ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಮಾಹಿತಿ ಸಂಗ್ರಹಿಸಿದರು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಹಿರಿಯ ಅಧಿಕಾರಿಗಳು ಅವರೊಂದಿಗೆ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here