ಹತ್ಯಡ್ಕ: ಅರಿಕೆಗುಡ್ಡೆ ವನದುರ್ಗಾ ಕ್ಷೇತ್ರದಲ್ಲಿಂದು ಅಷ್ಟಬಂಧ ಪ್ರತಿಷ್ಟಾಂಗ ದೃಢಕಲಶಾಭಿಷೇಕ ಮಹೋತ್ಸವ

0

ಹತ್ಯಡ್ಕ: ಅರಸಿನಮಕ್ಕಿಯ ಅರಿಕೆಗುಡ್ಡೆ ಶ್ರೀ ವನದುರ್ಗ ಕ್ಷೇತ್ರದಲ್ಲಿಂದು ಏ.18ರಂದು ಅಷ್ಟಬಂಧ ಪ್ರತಿಷ್ಟಾಂಗ ದೃಢಕಲಶಾಭಿಷೇಕ ಮಹೋತ್ಸವ ಮತ್ತು ಭಜನಾ ಮಹೋತ್ಸವವು ವೇ|ಮೂ। ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಬೆಳಿಗ್ಗೆ 7.30ರಿಂದ ಪುಣ್ಯಾಹ, ಗಣಪತಿ ಹೋಮ, ಕಲಶ ಪೂಜೆ, ಶಾಂತಿ ಪ್ರಾಯಶ್ಚಿತ ಹೋಮಗಳು, ವನದುರ್ಗಾ ಹೋಮ, ಹೋಮಕಲಶಾಭಿಷೇಕ, ಶ್ರೀ ದೇವರಿಗೆ ಕಲಶಾಭಿಷೇಕ, ನಾಗ ಹಾಗೂ ದೈವಗಳಿಗೆ ಕಲಶಾಭಿಷೇಕ, 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.

ಅಪರಾಹ್ನ 2.00 ಗಂಟೆಗೆ ಭಜನಾ ಮಹೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ಮೈಸೂರಿನ ಎಸ್.ಕೆ.ಡಿ.ಆರ್.ಪಿ. ಬಿ.ಸಿ. ಟ್ರಸ್ಟ್ ನ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಉದ್ಘಾಟಿಸಲಿದ್ದಾರೆ.

ಅಧ್ಯಕ್ಷತೆಯನ್ನು ಅರಿಕೆಗುಡ್ಡೆ ಶ್ರೀ ವನದುರ್ಗಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಟಿ.ಪಿಲಿಕ್ಕಬೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾಲೂಕು ಭಜನಾ ಪರಿಷತ್ತಿನ ಕಾರ್ಯದರ್ಶಿ ಪಿ.ಚಂದ್ರಶೇಖರ ಸಾಲ್ಯಾನ್ ಕೊಯ್ಯುರು, ಭಜನಾ ತರಬೇತುದಾರ ಹರೀಶ್ ವಿ.ನೆರಿಯ ಉಪಸ್ಥಿತರಿರಲಿದ್ದಾರೆ.

ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ ಜರುಗಲಿರುವುದು.

ಸಂಜೆ 4 ರಿಂದ ಬ್ರಹ್ಮಕಲಶೋತ್ಸವ ಕೃತಜ್ಞತಾ ಸಭೆ ನಡೆಯಲಿದ್ದು, ಸಂಜೆ 5ರಿಂದ ಕಡಬದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ ಅಧ್ಯಕ್ಷ ಸುಂದರ ಬೆಳಿನೆಲೆಯವರ ನಿರ್ವಹಣೆಯಲ್ಲಿ ತಾಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ ನೆರವೇರಲಿದೆ.

ರಾತ್ರಿ 7ಕ್ಕೆ ಮಹಾಪೂಜೆ, ಬಳಿಕ ಸಾಂಸ್ಕೃತಿಕ ವೈವಿಧ್ಯ ಪ್ರಸ್ತುತಗೊಳ್ಳಲಿದೆ.ಎಲ್ಲಾ ಕಾರ್ಯಕ್ರಮಗಳಿಗೂ ಭಕ್ತಾದಿಗಳು ತನು ಮನ ಧನಗಳಿಂದ ಸಹಕರಿಸುವುದರೊಂದಿಗೆ ದೇವಳಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ದೇವಳದ ಆಡಳಿತ ಸಮಿತಿ ತಿಳಿಸಿದೆ.

LEAVE A REPLY

Please enter your comment!
Please enter your name here