ಮುಂಡೂರು: ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಏ.22ರಂದು ವೇದಮೂರ್ತಿ ಆಲಂಬಾಡಿ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಬೆಳಗ್ಗೆ 6ರಿಂದ ಸಾಮೂಹಿಕ ಪ್ರಾರ್ಥನೆ, ಪುಣ್ಯಹವಾಚನ, 6.30ರಿಂದ ಗಣಪತಿ ಹೋಮ, ಕಲಶಾಭಿಷೇಕ, 7ರಿಂದ ಚಂಡಿಕಾ ಹೋಮ, 8.30ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ ಬಳಿಕ ದೇವರ ಬಲಿ ಉತ್ಸವ, ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 6.30ರಿಂದ ಮುಂಡೂರು ಶ್ರೀ ಶಾರದಾಂಬಾ ಭಜನಾ ಮಂಡಳಿ ಹಾಗೂ ಶ್ರೀಕ್ಷೇತ್ರ ಮಂಗಳಗಿರಿ ಶ್ರೀ ನಾಗಾಂಬಿಕ ಭಜನಾ ಮಂಡಳಿಯಿಂದ ಕುಣಿತ ಭಜನೆ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಬಳಿಕ ಸ್ಥಳೀಯ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ನೃತ್ಯ ವೈಭವ, ಮುಂಡೂರು ಜ್ಯೋತಿ ಯುವತಿ ಮಂಡಲದ ಸದಸ್ಯರಿಂದ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಆಡಳಿತಾಧಿಕಾರಿ, ಪ್ರಧಾನ ಅರ್ಚಕರು, ಸತ್ಯನಾರಾಯಣ ಪೂಜಾ ಸಮಿತಿ, ಜೀರ್ಣೋದ್ದಾರ, ಅಭಿವೃದ್ಧಿ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳು, ಗೌರವ ಸಲಹೆಗಾರರು, ಯುವ ಸಂಚಾಲನ ಸಮಿತಿ, ಮಹಿಳಾ ಸಂಚಾಲನ ಸಮಿತಿ, ಶ್ರೀ ಶಾರದಾ0ಬಾ ಭಜನಾ ಮಂಡಳಿ, ಭಕ್ತ ವೃಂದ, ಗ್ರಾಮದ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ವಿನಂತಿಸಿದ್ದಾರೆ.