ಬೆಳ್ತಂಗಡಿ: ಇಲ್ಲಿನ ವಾಣಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದು, ಪರೀಕ್ಷೆಗೆ ಹಾಜರಾದ 493 ವಿದ್ಯಾರ್ಥಿಗಳ ಪೈಕಿ 484 ಮಂದಿ ಉತ್ತೀರ್ಣರಾಗಿದ್ದಾರೆ. ಆ ಮೂಲಕ ಶೇ.98.17 ಫಲಿತಾಂಶ ದಾಖಲಾಗಿದೆ. 190 ಮಂದಿಗೆ ಡಿಸ್ಟಿಂಕ್ಷನ್, 280 ಮಂದಿ ಪ್ರಥಮ ದರ್ಜೆ, 14 ಮಂದಿ ದ್ವಿತೀಯ ದರ್ಜೆ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 231 ಮಂದಿಯಲ್ಲಿ 227 ಮಂದಿ ಉತ್ತೀರ್ಣರಾಗಿದ್ದು, ಶೇ.98.23 ಫಲಿತಾಂಶ ಬಂದಿದೆ. 98 ಮಂದಿಗೆ ಡಿಸ್ಟಿಂಕ್ಷನ್, 123 ಮಂದಿ ಫಸ್ಟ್ ಕ್ಲಾಸ್, 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ 240 ವಿದ್ಯಾರ್ಥಿಗಳ ಪೈಕಿ 235 ಮಂದಿ ಉತ್ತೀರ್ಣರಾಗುವ ಮೂಲಕ ಶೇ.97.91 ಫಲಿತಾಂಶ ದಾಖಲಾಗಿದೆ. 85 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 145 ಮಂದಿ ಫಸ್ಟ್ ಕ್ಲಾಸ್, 5 ವಿದ್ಯಾರ್ಥಿಗಳು ಸೆಕೆಂಡ್ ಕ್ಲಾಸ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದ ಎಲ್ಲ 22 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.100 ಫಲಿತಾಂಶ ದಾಖಲಾಗಿದೆ. 7 ಮಂದಿಗೆ ಡಿಸ್ಟಿಂಕ್ಷನ್, 12 ಮಂದಿ ಪ್ರಥಮ ದರ್ಜೆ, ಮೂವರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕೆಮೆಸ್ಟ್ರಿ, ಬಯಾಲಜಿ, ಅಕೌಂಟೆನ್ಸಿ, ಬಿಸಿನೆಸ್ ಸ್ಟಡೀಸ್, ಇತಿಹಾಸ, ಇಕನಾಮಿಕ್ಸ್, ಪೊಲಿಟಿಕಲ್ ಸೈನ್ಸ್, ಕನ್ನಡ ಐಚ್ಛಿಕ, ಇಂಗ್ಲೀಷ್, ಕನ್ನಡ, ಹಿಂದಿಯಲ್ಲಿ ಶೇ.೧೦೦ ಫಲಿತಾಂಶ ಬಂದಿದೆ ಎಂದು ಪ್ರಾಂಶುಪಾಲ ಯದುಪತಿ ಗೌಡ ಮಾಹಿತಿ ನೀಡಿದ್ದಾರೆ.