ರೆಖ್ಯ, ಕೊಕ್ಕಡ, ಶಿಶಿಲ, ಕಳೆಂಜ ರಸ್ತೆಗಳಲ್ಲಿ ಶೌರ್ಯ ವಿಪತ್ತು ತಂಡದಿಂದ ವೇಗ ನಿಯಂತ್ರಣ ಉಬ್ಬುಗಳಿಗೆ ಬಣ್ಣ ಬಳಿಯುವ ಕಾರ್ಯ

0

ಬೆಳ್ತಂಗಡಿ: ರೆಖ್ಯ, ಕೊಕ್ಕಡ, ಶಿಶಿಲ, ಕಳೆಂಜ ಈ ರಸ್ತೆಗಳಲ್ಲಿ ಅನೇಕ ಕಡೆ ವೇಗ ನಿಯಂತ್ರಕ ಉಬ್ಬುಗಳಿದ್ದು ಈ ಬಗ್ಗೆ ಯಾವುದೇ ಸೂಚನಾ ಫಲಕಗಳು ಇಲ್ಲದೆ ಇರುವುದರಿಂದ ಅನೇಕ ದ್ವಿಚಕ್ರ ವಾಹನಗಳಿಗೆ ತುಂಬಾ ಅಪಘಾತಗಳು ಆಗುತ್ತಿದ್ದವು.

ಇದನ್ನು ಮನಗಂಡ ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸೇವಾ ಪ್ರತಿನಿಧಿ ಮತ್ತು ಘಟಕ ಪ್ರತಿನಿಧಿಯವರು, ಶೌರ್ಯ ವಿಪತ್ತು ನಿರ್ವಹಣೆ ಘಟಕದ ಯೋಜನಾಧಿಕಾರಿಯವರಾದ ಜೈವಂತ್ ಪಟ್ಕರ್ ಇವರಲ್ಲಿ ತಿಳಿಸಿದಾಗ ಇವರು ಈ ಕೆಲಸವನ್ನು ಉತ್ತೇಜಿಸಿ ರೆಖ್ಯ, ಕೊಕ್ಕಡ, ಕಳೆಂಜ, ಶಿಶಿಲ ರಸ್ತೆಗಳಲ್ಲಿ ವೇಗ ನಿಯಂತ್ರಣ ಉಬ್ಬುಗಳಿಗೆ ಬಣ್ಣ ಬಳಿದು ಅವುಗಳು ದೂರದಿಂದಲೇ ಸ್ಪಷ್ಟವಾಗಿ ಗೋಚರಿಸುವಂತಹ ಕೆಲಸವನ್ನು ಅರಸಿನಮಕ್ಕಿ ಶಿಶಿಲದ ಶೌರ್ಯ ವಿಪತ್ತು ನಿರ್ವಹಣಾ ತಂಡವು ಮಾಡಿದರು.

ವಿಪತ್ತು ತಂಡದ ಸದಸ್ಯರಾದ ಪ್ರವೀಣ್ , ಅವಿನಾಶ್ ಭಿಡೆ, ಸುರೇಶ, ಹರೀಶ್, ಶೀನಪ್ಪ ಆನಂದ, ಚೇತನ್ , ರಾಧಾಕೃಷ್ಣ, ರಶ್ಮಿತ ಇವರೊಂದಿಗೆ ಸ್ಥಳೀಯ ಜನಪ್ರತಿನಿಧಿಗಳಾದ ನವೀನ್ ರೆಖ್ಯ ಮತ್ತು ಕರುಣಾಕರ್ ಶಿಶಿಲ ಸಹಕರಿಸಿದ್ದು ಈ ಕೆಲಸಕ್ಕೆ ತಗುಲುವ ಪೇಂಟಿನ ವೆಚ್ಚವನ್ನು ಎಸ್ ಕೆ ಡಿ ಆರ್ ಡಿ ಪಿ ಸಂಸ್ಥೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕರಾದ B.ಜಯರಾಮ್ ನೆಲ್ಲಿತ್ತಾಯ ಇವರು ಮತ್ತು ಹತ್ಯಡ್ಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ಇವರು ಭರಿಸಿರುತ್ತಾರೆ.

p>

LEAVE A REPLY

Please enter your comment!
Please enter your name here