ಎ.10-17: ಶ್ರೀ ರಾಮ ಕ್ಷೇತ್ರದಲ್ಲಿ 64ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ, ಪ್ರತಿಷ್ಠಾ ಜಾತ್ರಾ ಮಹೋತ್ಸವಕ್ಕೆ ಚಾಲನೆ

0

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ ನಿತ್ಯಾನಂದ ನಗರ ಶ್ರೀ ಭಗವಾನ್ ನಿತ್ಯಾನಂದ ದೇವಸ್ಥಾನದಲ್ಲಿ 64ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ, ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವ ಎ.10ರಿಂದ 17ರವರೆಗೆ ನಡೆಯಲಿದೆ.

ಎ.10ರಂದು ಕ್ಷೇತ್ರದ ನಿರ್ಮಾತೃ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸ್ಮರಣೆಯೊಂದಿಗೆ ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಳಿಗ್ಗೆ ಸ್ವಸ್ತಿ ಪುಣ್ಯಾಹ, ಸ್ಥಳ ಶುದ್ಧಿ, ಧ್ವಜ ಪೂಜೆ, ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ನಾರಿಕೇಳ ಗಣಯಾಗ, ಶ್ರೀ ದೇವರಿಗೆ, ಗುರುಗಳಿಗೆ ವಿಶೇಷ ಅಲಂಕಾರ ಪೂಜೆ ನಡೆದು ಬಳಿ ಶ್ರೀ ರಾಮ ನಾಮ ಸಪ್ತಾಹದ ಅಖಂಡ ನಂದಾದೀಪ ಬೆಳಗಿಸುವ ಮೂಲಕ ಗಣ್ಯರು ಉದ್ಘಾಟಿಸಿದರು. ಶ್ರೀ ರಾಮ ತಾರಕ ಮಂತ್ರ ಉಚ್ಚಾರಣೆ ಮೂಲಕ ಭಜನಾ ಸಪ್ತಾಹಕಕ್ಕೆ ಸ್ವಾಮೀಜಿ ಚಾಲನೆ ನೀಡಿದರು. ಪ್ರತಿದಿನ ವೈದಿಕ ಕಾರ್ಯಕ್ರಮ ಬಲಿ ಉತ್ಸವ ನಡೆಯಲಿದೆ.

ಎ.13ರಿಂದ ಸಂಜೆ 17 ರವರೆಗೆ ಪ್ರತಿ ದಿನ ವಿವಿಧ ರಥೋತ್ಸವ ನಡೆಯಲಿದೆ. ಎ.17ರಂದು ಬೆಳಿಗ್ಗೆ ವಿಷ್ಣು ಸಹಸ್ರನಾಮ ಹೋಮ, ಶ್ರೀ ರಾಮ ತಾರಕ ಮಂತ್ರ ಯಜ್ಞ ಮಂಗಳಂ, ಹಗಲು ಉತ್ಸವ, ಸಂಜೆ ಬಲಿ ಉತ್ಸವ, ಭೂತ ಬಲಿ ಶ್ರೀ ದೇವರ ಪಾಲಕಿ ಬಲಿ, ಕ್ಷೇತ್ರದ ರಕ್ತೇಶ್ವರಿ ಮತ್ತು ಗುಳಿಗ ದೈವಗಳ ನೇಮೋತ್ಸವ, ಮಹಾ ಬ್ರಹ್ಮ ರಥೋತ್ಸವ ಜರಗಲಿದೆ.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಶ್ರೀರಾಮ ಕ್ಷೇತ್ರ ಸಮಿತಿ ಸಂಚಾಲಕ ಜಯಂತ ಕೋಟ್ಯಾನ್, ದೊಂಡೋಲೆ ಅನಂತರಾಮ ರಾವ್ ಚಾರ್ಮಾಡಿ, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್, ತಾ.ಪ.ಮಾಜಿ ಸದಸ್ಯ ಶಶಿಧರ ನೀಡಿಗಲ್, ವೇಣೂರು ಪ್ರಾ.ಕೃ.ಪ.ಸ.ಸಂ ಅಧ್ಯಕ್ಷ ಸುಂದರ ಹೆಗ್ಡೆ, ಶ್ರೀ ರಾಮ ಕ್ಷೇತ್ರ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಪ್ರಶಾಂತ್ ಪಾರೆಂಕಿ, ಮೆಲ್ಕಾರ್ ಬಿರ್ವ ಸೆಂಟರ್ ಸಂಜೀವ ಪೂಜಾರಿ, ಟ್ರಷ್ಟಿ ತುಕಾರಾಮ ಸಾಲಿಯಾನ್, ಹಿರಿಯ ವಾಹನ ನಿರೀಕ್ಷಕ ಚರಣ್ ಕುಮಾರ್, ಎಸಿ ರಾಜು ನಾಯ್ಕ ಅಣ್ಣಿ ಪೂಜಾರಿ ಉಜಿರೆ, ರವೀಂದ್ರ ಪೂಜಾರಿ ಆರ್ಲ, ಪುರುಷೋತ್ತಮ ಧರ್ಮಸ್ಥಳ, ಸಚಿನ್ ಕಲ್ಮಂಜ, ಸುನಿಲ್ ಕನ್ಯಾಡಿ, ಗಂಗಾಧರ ಸಾಲಿಯಾನ್ ಬೆಳಾಲು, ಸುದರ್ಶನ್ ಕನ್ಯಾಡಿ, ಸುಜಾತಾ ಅಣ್ಣಿ ಪೂಜಾರಿ, ಅರ್ಚಕ ವೃಂದ,ಕ್ಷೇತ್ರದ ಸಿಬ್ಬಂದಿಗಳು, ರಥ ಬೀದಿ ವ್ಯಾಪಾರಸ್ಥರು, ವಿವಿಧ ಭಜನಾ ಮಂಡಳಿಗಳ ಸದಸ್ಯರು ಮೊದಲದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here