ಪಟ್ಟೂರು: ಶ್ರೀರಾಮ ವಿದ್ಯಾಸಂಸ್ಥೆ, ಪಟ್ರಮೆ ಗ್ರಾ.ಪಂ, ಸಾರ್ವಜನಿಕ ಗ್ರಂಥಾಲಯ ಸಂಯೋಗದಲ್ಲಿ ಮತದಾನ ಜಾಗೃತಿ ಕಾರ್ಯಗಾರ

0

ಪಟ್ಟೂರು: ಶ್ರೀರಾಮ ವಿದ್ಯಾಸಂಸ್ಥೆ, ಪಟ್ರಮೆ ಗ್ರಾಮ ಪಂಚಾಯತ್, ಸಾರ್ವಜನಿಕ ಗ್ರಂಥಾಲಯ ಇದರ ಸಂಯೋಗದಲ್ಲಿ ಮತದಾನ ಜಾಗೃತಿ ಕಾರ್ಯಗಾರ ಆಯೋಜಿಸಲಾಯಿತು.

ಶ್ರೀರಾಮ ವಿದ್ಯಾ ಸಂಸ್ಥೆ ಪಟ್ಟೂರಿನ ಮುಖ್ಯೋಪಾಧ್ಯಯ ಚಂದ್ರಶೇಖರ್ ಶೇಟ್, ಪಟ್ರಮೆ ಗ್ರಾಮ ಪಂಚಾಯತ್ ಸಾರ್ವಜನಿಕ ಗ್ರಂಥಾಲಯ ವಿಭಾಗದ ಗ್ರಂಥ ಪಾಲಕಿ ವಿದ್ಯಾ ಸರಸ್ವತಿ ಹಾಗೂ ಶಾಲಾ ಹಂತದ ಮತದಾರ ಸಾಕ್ಷರತಾ ಸಂಘದ ಸಂಚಾಲಕರು (ELC) ಆದ ಸುಪ್ರೀತ ಎ ಉಪಸ್ಥಿತರಿದ್ದರು.

ಕಾರ್ಯಗಾರದಲ್ಲಿ ಚಂದ್ರಶೇಖರ್ ಶೇಟ್ ಚುನಾವಣೆ ಮತದಾನ ಎಂಬುದು ಪ್ರಜಾಪ್ರಭುತ್ವ ಹಬ್ಬ ಇದ್ದಂತೆ ಪ್ರಜ್ಞಾವಂತನಾದ ನಿಜವಾದ ದೇಶದ ಪ್ರಜೆಯು ಚುನಾವಣೆ ದಿನದಂದು ಮತದಾನ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವುದರ ಮೂಲಕ ದೇಶದ ಪ್ರತಿ ತನ್ನ ಕರ್ತವ್ಯವನ್ನು ಪಾಲಿಸಬೇಕು ಎಂದು ತಿಳಿಸಿದರು.

ಮುಂಬರುವ ಏ.26ರಂದು ನಡೆಯಲಿರುವ ಲೋಕಸಭಾ ಚುನಾವಣೆ 2024ರಲ್ಲಿ ನಮ್ಮ ಗ್ರಾಮದ 18 ವರ್ಷ ಮೇಲ್ಪಟ್ಟ ಎಲ್ಲಾ ಮತದಾನ ಬಾಂಧವರು ಮತದಾನ ಮಾಡುವಂತೆ ಶಾಲಾ ವಿದ್ಯಾರ್ಥಿಗಳು ಪ್ರೇರೇಪಿಸಬೇಕು.18 ವರ್ಷ ಮೇಲ್ಪಟ್ಟವರ ನಿಮ್ಮ ಮನೆಗಳಲ್ಲಿದ್ದರೆ ಅವರು ತಮ್ಮ ಹೆಸರನ್ನು ಕಡ್ಡಾಯವಾಗ ನೋಂದಣಿ ಮಾಡಿಸಿಕೊಳ್ಳಬೇಕು ಮತ್ತು ಆದ್ಯತೆಯ ಮೇರೆಗೆ ಮತದಾನ ಮಾಡಬೇಕು ಎಂದು ಶಾಲಾ ಮಕ್ಕಳಿಗೆ ಮಾಹಿತಿಯನ್ನು ನೀಡಿದರು. ನೆರೆಹೊರೆಯ ಮನೆಯವರು ಮತದಾನ ಮಾಡುವಂತೆ ಪ್ರೇರೇಪಿಸಬೇಕು.

ಗ್ರಂಥ ಪಾಲಕಿ ವಿದ್ಯಾ ಸರಸ್ವತಿ ರವರು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ನಮ್ಮ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ವ್ಯವಸ್ಥೆಯು ಒಂದು ಪ್ರಮುಖವಾದ ಘಟ್ಟವಾಗಿದೆ. ಇದರ ಭಾಗವಾಗಿ ಎ.26ನೇ ತಾರೀಖಿನಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಮನೆಯ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾನ ಮಾಡಬೇಕು.

ಅದಕ್ಕಾಗಿ ನಡೆಸುತ್ತಿರುವ ಜಾಗೃತಿ ಅಭಿಯಾನದಲ್ಲಿ ನೀವೆಲ್ಲ ವಿದ್ಯಾರ್ಥಿಗಳು ಪ್ರೇರಕರಾಗಿ ಭಾಗವಹಿಸಿ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here