ಇಂದು(ಮಾ.29): ಎಲ್ಲಾ ಚರ್ಚ್ ಗಳಲ್ಲಿ ಗುಡ್ ಫ್ರೈಡೆ ಆಚರಣೆ- ಬೆಳಿಗ್ಗೆಯಿಂದ ಸಂಜೆವರೆಗೆ ವಿಶೇಷ ಪ್ರಾರ್ಥನೆ

0

ಬೆಳ್ತಂಗಡಿ: ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಪ್ರಯುಕ್ತ ಮಾ.29ರಂದು ‘ಗುಡ್ ಫ್ರೈಡೆ’ ಎಲ್ಲಾ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ಶಿಲುಬೆಯ ಹಾದಿ ಆಚರಿಸಲಾಗುತ್ತದೆ.

ಶಿಲುಬೆಯ ಆರಾಧನೆ ನಡೆಸಲಾಗುತ್ತದೆ.ಈ ದಿನ ಕ್ರೈಸ್ತರು ಉಪವಾಸ ವ್ರತ ಆಚರಿಸುತ್ತಾರೆ.ಇಂದು ಪವಿತ್ರ ಸಭೆಯಲ್ಲಿ ಬಲಿಪೂಜೆಗಳು ನಡೆಯುದಿಲ್ಲ.

ಬೆಳ್ತಂಗಡಿ ಸಂತ ಲಾರೆನ್ಸ್ ಕೆಥೆಡ್ರಲ್ ನಲ್ಲಿ ಬಿಷಪ್ ಲಾರೆನ್ಸ್ ಮುಕ್ಕುಯಿಯವರ ನೇತೃತ್ವ ದಲ್ಲಿ ಪ್ರಾರ್ಥನೆ, ಶಿಲುಬೆಯ ಹಾದಿ ನಡೆಸಲಾಯಿತು.

ಮಾ.30ರಂದು ಈಸ್ಟ‌ರ್ ಜಾಗರಣೆಯ ದಿನ.ಏಸು ಕ್ರಿಸ್ತರು 3ನೇ ದಿನದಲ್ಲಿ ಪುನರುತ್ತಾನರಾಗುತ್ತಾರೆ ಎಂದು ಮೊದಲೇ ಬೈಬಲ್ ಬರಹದಲ್ಲಿ ಇದ್ದ ಹಾಗೆ ಅವರ ಆಗಮನಕ್ಕೆ ಕಾಯುವಂತಹ ದಿನ.

ಅಂದು ಹೊಸ ಬೆಳಕು, ದೂಪ, ತೀರ್ಥ ನೀರು ಶುದ್ಧಿಕರಣ, ಹಳೆ ಹೊಡಂಬಡಿಕೆ ಮತ್ತು ಹೊಸ ಹೊಡಂಬಡಿಕೆಯ ಬೈಬಲ್ ವಾಚನ, ಪ್ರಾರ್ಥನೆ, ಸಂಗೀತಾ ಗಾಯನಗಳೊಂದಿಗೆ ಬಲಿಪೂಜೆಗಳು ನಡೆಯಲಿದೆ.

ಮಾ.31ರಂದು ಭಾನುವಾರ ಏಸು ಕ್ರಿಸ್ತರ ಪುನರುತ್ತಾನದ ಹಬ್ಬ (ಈಸ್ಟರ್ ಹಬ್ಬ) ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.

p>

LEAVE A REPLY

Please enter your comment!
Please enter your name here