ಧರ್ಮಸ್ಥಳ: ಶ್ರೀ ಧ.ಮಂ.ಆಂ.ಮಾ ಶಾಲೆಯಲ್ಲಿ ಸಮ್ಮರ್ ಪ್ಯಾರಡೈಸ್ ಉದ್ಘಾಟನಾ ಸಮಾರಂಭ

0

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಶಿಬಿರ ಸಮ್ಮರ್ ಪ್ಯಾರಡೈಸ್ ಉದ್ಘಾಟನಾ ಸಮಾರಂಭ ನಡೆಯಿತು.

ಉದ್ಘಾಟಕರಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಧರ್ಮಸ್ಥಳದ ಮುಖ್ಯೋಪಾಧ್ಯಾಯರಾಗಿರುವ ಸುಬ್ರಹ್ಮಣ್ಯ ಪಡುವೆಟ್ನಾಯ ದೀಪ ಪ್ರಜ್ವಲಿಸಿ ಬೇಸಿಗೆ ಶಿಬಿರಕ್ಕೆ ಚಾಲನೆ ಕೊಟ್ಟರು.ತದನಂತರ ಮಾತನಾಡಿದ ಅವರು ಗುರುವಿನ ಮಹತ್ವ, ಹೆತ್ತವರ ಮಹತ್ವ, ಸಮಯದ ಮಹತ್ವ, ವಿದ್ಯಾರ್ಥಿ ಜೀವನದ ಗುರಿ ಜೀವನದ ಗುರಿ ಇತ್ಯಾದಿ ಹತ್ತು ಹಲವು ವಿಚಾರವನ್ನು ಹೇಳಿದರು.

ಮಾತನಾಡಿದ ರಾಮ್ ಕಿಶೋರ್ ಕೂಡ್ಲು ಡ್ರೀಮ್ ಕಿಡ್ ಎಂಬ ಸಂಸ್ಥೆಯ ಸದಸ್ಯ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ವಿದ್ಯಾರ್ಥಿಗಳು ಅದನ್ನು ಉಪಯೋಗಿಸುವ ರೀತಿ ಇತ್ಯಾದಿಗಳನ್ನು ವಿವರಿಸಿದರು.ಈ ಬೇಸಿಗೆ ಶಿಬಿರದಲ್ಲಿ ವಿವಿಧ ವಿಭಾಗಗಳಿವೆ ಅಡುಗೆ, ಕ್ರಾಫ್ಟ್, ಚಿತ್ರಕಲೆ, ವಿಜ್ಞಾನ ಹಾಗೂ ಇನ್ನೂ ಅನೇಕ ಸೃಜನಶೀಲ ಚಟುವಟಿಕೆಗಳಿದ್ದು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿವೆ.

ಒಟ್ಟಾರೆಯಾಗಿ ನಾಲ್ಕು ದಿನದಲ್ಲಿ ನಡೆಯುವ ಈ ಬೇಸಿಗೆ ಶಿಬಿರವು ವಿದ್ಯಾರ್ಥಿಗಳ ಜೀವನಕ್ಕೆ ಬೇಕಾದಷ್ಟು ಪೂರಕವಾದ ಅಂಶಗಳನ್ನು ಒದಗಿಸಿಕೊಡುತ್ತದೆ.

ಶಾಲಾ ವಿದ್ಯಾರ್ಥಿನಿಕುಮಾರಿ ಆದ್ಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ. ಪ್ರಾಸ್ತಾವಿಕ ನುಡಿಗಳೊಂದಿಗೆ ಮಾತನಾಡಿ ಸ್ವಾಗತಿಸಿದರು.ವರ್ಧನ್ ವಂದಿಸಿದರು.

LEAVE A REPLY

Please enter your comment!
Please enter your name here