ಪುಂಜಾಲಕಟ್ಟೆ ಪ್ರ.ದ ಕಾಲೇಜಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

0

ಬೆಳ್ತಂಗಡಿ: ಪುಂಜಾಲಕಟ್ಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾ.25ರಂದು ದಕ್ಷಿಣ ಕನ್ನಡ ಜಿಲ್ಲಾ ಮತ್ತು ಬೆಳ್ತಂಗಡಿ ತಾಲೂಕು ಸ್ವೀಪ್ ಸಮಿತಿ, ಮಡಂತ್ಯಾರು ಗ್ರಾಮ ಪಂಚಾಯತ್, ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗ, ಮತದಾರ ಸಾಕ್ಷರತಾ ಸಂಘ, ಮಾನವಿಕ ಸಂಘ ಇದರ ಸಹಯೋಗದಲ್ಲಿ 2024 ಲೋಕ ಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಪ್ರಾಂಶುಪಾಲ ಮಾಧವ ಎಂ. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಜಾಗೃತಿ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಮಟ್ಟದ ಸ್ವೀಪ್ ತರಬೇತುದಾರ ಯೋಗೇಶ ಹೆಚ್.ಆರ್, ತಾಲೂಕು ಮಟ್ಟದ ಸ್ವೀಪ್ ತರಬೇತುದಾರ ರವಿಕುಮಾರ್ ಬಿ.ಆರ್., ಮಡಂತ್ಯಾರ್ ಗ್ರಾ.ಪಂ ಕಾರ್ಯದರ್ಶಿ ಮೊರ್ಲಿನ್ ಕ್ರಿಸ್ತೀನ್ ಡಿ.ಸೋಜಾ, ತಾಲೂಕು ನರೇಗಾ ಐಇಸಿ ಸಂಯೋಜಕರು ವಿನಿಷ, ಹಾಗೂ ಕಾಲೇಜಿನ ಇ.ಎಲ್.ಸಿ ಸಂಚಾಲಕ ಶೇಖರ್ ಮತ್ತು ಸಹ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಭುತ್ವದ ಈ ಚುನಾವಣಾ ಹಬ್ಬದಲ್ಲಿ ಯುವ ಮತ್ತು ಭವಿಷ್ಯದ ಮತದಾರರ ಮಹತ್ವ ಹಾಗೂ ತಾಲೂಕು ಮತ್ತು ಜಿಲ್ಲೆಯ ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಜಿಲ್ಲಾ ಮಟ್ಟದ ಸ್ವೀಪ್ ತರಬೇತುದಾರ ಯೋಗೇಶ ಹೆಚ್.ಆರ್ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿ ಎಲ್ಲರ ಸಹಕಾರ ಕೋರಿದರು.

p>

LEAVE A REPLY

Please enter your comment!
Please enter your name here