ಉಜಿರೆ: ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಭಜನೆಯ ಪಾತ್ರ ಮಹತ್ತರವಾದುದು, ಶ್ರದ್ಧಾಕೇಂದ್ರಗಳಲ್ಲಿ ಭಜನೆ ನಿರಂತರವಾಗಿ ನಡೆಯಬೇಕು ಮತ್ತು ಸಮಾಜಕ್ಕೆ ಸಕಾರಾತ್ಮಕ ಪ್ರೇರಣೆ ನಿರಂತರವಾಗಿ ಸಿಗಬೇಕೆಂದು ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರವರು ಹೇಳಿದರು.
ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಕುಣಿತ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅವರು ಭಜನೆಯ ಮಹತ್ವದ ಕುರಿತಾಗಿ ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು.
ಸುಧಾಕರ್ ಇವರು ಸಂಕಲ್ಪವಿಧಿಯನ್ನು ಬೋಧಿಸಿದರು.
ಲಕ್ಷ್ಮಿಗ್ರೂಪ್ ಮಾಲಕ ಮೋಹನ್ ಕುಮಾರ್ ನೂತನ ತಂಡಕ್ಕೆ ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ವರ್ತಕರ ಸಂಘದ ಅಧ್ಯಕ್ಷರಾದ ಅರವಿಂದ ಕಾರಂತ್, ಭರತ್ ಕುಮಾರ್ ಕೆ, ಪಾಲ್ಗೊಂಡಿದ್ದರು.
ಶಿವಪ್ರಸಾದ್ ಸುರ್ಯ ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂತೋಷ ಅತ್ತಾಜೆ ವಂದಿಸಿದರು.
ಶ್ರೀ ಶರತ್ ಕೃಷ್ಣ ಪಡ್ವೇಟ್ನಾಯರವರ ಗೌರವಾಧ್ಯಕ್ಷತೆ, ಮೋಹನ್ ಕುಮಾರ್ ಲಕ್ಷ್ಮೀಗ್ರೂಪ್ಸ್ ಮಾರ್ಗದರ್ಶನದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಛತ್ರಪತಿ ಶಿವಾಜಿ ಭಜನಾ ಮಂಡಳಿ ನೂತನ ಸಮಿತಿ ಗೌರವಾಧ್ಯಕ್ಷರಾಗಿ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯ, ಗೌರವ ಮಾರ್ಗದರ್ಶನರಾಗಿ ಮೋಹನ್ ಕುಮಾರ್ ಲಕ್ಷ್ಮೀಗ್ರೂಪ್ಸ್ ಉಜಿರೆ, ಗೌರವ ಸಲಹೆಗರಾರರಾಗಿ ಭರತ್ ಮಹಾಲಕ್ಷ್ಮಿ, ಅರವಿಂದ್ ಕಾರಂತ್, ಶಿವಪ್ರಸಾದ್ ಸುರ್ಯ, ಸೌಮ್ಯ ರಾವ್ ಮಾಚಾರ್, ಸಂತೋಷ್ ಅತ್ತಾಜೆ, ಸುಧಾಕರ್, ಅಧ್ಯಕ್ಷರಾಗಿ ನಾರಾಯಣ ಮಲೆಯಡ್ಕ, ಉಪಾಧ್ಯಕ್ಷೆಯಾಗಿ ವಿನೋದ ಕುಂಟಿನಿ, ಕಾರ್ಯದರ್ಶಿಯಾಗಿ ನಾಗೇಶ್ ಕುಮಾರ್, ಜೊತೆ ಕಾರ್ಯದರ್ಶಿಯಾಗಿ ಗುರು ಪ್ರಸಾದ್ ಕೋಡಿಜಾಲು, ಕೋಶಾಧಿಕಾರಿಯಾಗಿ ಮುನಿಷ್, ಲೆಕ್ಕ ಪರಿಶೋಧಕರಾಗಿ ಶಿವಪ್ರಸಾದ್ ಸುರ್ಯ, ಸುಧಾಕರ್, ಸದಸ್ಯರು ಮತ್ತು ಸಂಚಾಲಕರಾಗಿ ಪ್ರವೀಣ್, ಅನಂತು, ಚಂದ್ರ ರಥಬೀದಿ, ಉದಯ ಕುಂಟಿನಿ, ಗುರು ಅರಳಿ, ಸುಮಂಗಲಾ ಜೆ, ಗುಣವತಿ ಮಲೆಯಡ್ಕ, ಸುಜಾತ ಏನ್, ಭಜಕರು ಮತ್ತು ಪೋಷಕ ಸದಸ್ಯರು, ಛತ್ರಪತಿ ಶಿವಾಜಿ ಭಜನಾ ಮಂಡಳಿ ಉಜಿರೆ ಆಯ್ಕೆಯಾದರು.