ಮಾ.14ರಿಂದ ಕೊಯ್ಯೂರು ಶ್ರೀ ಪಂಚಾದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೆ

0

ಕೊಯ್ಯೂರು: ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೆ ಮೀನ ಸಂಕ್ರಮಣ ಮಾ.14ರಿಂದ ಮೊದಲ್ಗೊಂಡು ಮಾ.19ರ ವರೆಗೆ ವೇದಮೂರ್ತಿ ನಂದಕುಮಾರ ತಂತ್ರಿ ಇವರ ನೇತೃತ್ವದಲ್ಲಿ ಜರಗಲಿರುವುದು.

ಮಾ.14ರಂದು ಬೆಳಿಗ್ಗೆ ಗಂಟೆ 11ಕ್ಕೆ ಪ್ರಾರ್ಥನೆ, ಪ್ರಶ್ನಾಚಿಂತನೆ, ತೋರಣ ಮುಹೂರ್ತ, ಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ ರಾತ್ರಿಉತ್ಸವ, ಮಹಾಪೂಜೆ, ಬಲಿ.

ಮಾ.15ರಂದು ಬೆಳಿಗ್ಗೆ ಉತ್ಸವ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಉತ್ಸವ, ಪಡಿಯಕ್ಕಿ, ಮಹಾಪೂಜೆ, ಬಲಿ.

ಮಾ.16ರಂದು ಬೆಳಿಗ್ಗೆ ಗಂಟೆ 9 ರಿಂದ ದರ್ಶನ ಬಲಿ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಗಂಟೆ 8ರಿಂದ ಕೊಟ್ಟಿಗೆ ಕೆಲಸ, ಮಹಾರಥೋತ್ಸವ, ಮಹಾಪೂಜೆ, ಭೂತಬಲಿ, ಕವಾಟ ಬಂಧನ, ಶ್ರೀ ಉಮನಾಥ ದೇವಾಡಿಗ, ಅಶ್ವಥಪುರ ಮತ್ತು ಬಳಗದಿಂದ ನಾಗಶ್ವರ ವಾಧನ.

ಮಾ.17ರಂದು ಬೆಳಿಗ್ಗೆ ಕವಾಟ ಉದ್ಘಾಟನೆ, ಅಭಿಷೇಕ, ಪ್ರಸನ್ನಪೂಜೆ ಮೂಲಸ್ಥಾನ ಗುಂಡದಿಂದ ಭಂಡಾರದ ಆಗಮನ ಮಹಾಪೂಜೆ.

ವಿಶೇಷ ಆಕರ್ಷಣೆ: ನಾಸಿಕ್ ಬ್ಯಾಂಡು, ಶೆಟ್ಟಿ ಆಟ್ಸ್ ಬೆಳ್ತಂಗಡಿ ಇವರಿಂದ ಕೀಲುಕುದುರೆ, ಬಣ್ಣದ ಕೊಡೆಗಳು, ಪ್ರಭಾಕರ್ ನ್ಯಾಕ್ ಬೆಳಾಲು ಇವರಿಂದ ಮಹಮ್ಮಾಯಿ ಗುಮ್ಮಟ ನೃತ್ಯ, ಶ್ರೀ ಕೃಷ್ಣ ಭಜನಾ ತಂಡದವರಿಂದ ಮತ್ತು ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ಭಜನಾ ತಂಡದಿಂದ ಭಜನೆ, ಕೋಳ್ಯೋರು ಭಾಸ್ಕರ ಮತ್ತು ಬಳಗದಿಂದ ಚೆಂಡೆ ವಾದನ, ಬೆಳಿಗ್ಗೆ ಗಂಟೆ 11ಕ್ಕೆ ಶ್ರೀ ಚಂಡಿಕಾ ಯಾಗ, ಜಿಲ್ಲಾ ಪ್ರಶಸ್ತಿ ವಿಜೇತ ಆರ್ಯಭಟ ಶ್ರೀ ಹರಿದಾಸ ಡೋಗ್ರ ಇವರಿಂದ ಸ್ಯಾಕ್ಸೋಫೋನ್ ವಾದನ, ರಾತ್ರಿ ಬೆಳ್ತಂಗಡಿ ಶೆಟ್ಟಿ ಆರ್ಟ್ಸ್ ಗಿರಿಧರ ಶೆಟ್ಟಿ ಬಳಗದವರಿಂದ ವಿನೂತನ ಶೈಲಿಯ ನೃತ್ಯ ಶ್ರೀ ಪಂಚದುರ್ಗಾಪರಮೇಶ್ವರಿ ಗೆಳೆಯರ ಬಳಗ ಕೊಯ್ಯೂರು ಇವರಿಂದ ಬರವುದ ಬೊಳ್ಳಿರಾಜೇಶ್ ಆಚಾರ್ಯ ಪರ್ಕಳ ವಿರಚಿತ ‘ಏರ್ ತಾಂಕುವೆರ್’ ತುಳು ಹಾಸ್ಯ ಸಾಂಸಾರಿಕ ನಾಟಕ, ರಾತ್ರಿ ಧರ್ಮದೈವಗಳ ನೇಮೋತ್ಸವ, ಶ್ರೀ ದೇವರ ಉತ್ಸವ, ಶ್ರೀ ಉಳ್ಳಾಲ್ತಿ ನೇಮೋತ್ಸವ, ಮಹಾಪೂಜೆ.

ಮಾ.18ರಂದು ಬೆಳಿಗ್ಗೆ ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಗಂಟೆ 6ರಿಂದ ಅವಭೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ.

ಮಾ.19ರಂದು ಸಂಪ್ರೋಕ್ಷಣೆ ಮಹಾಪೂಜೆ, ಮಾ.22ರಂದು 6.30ರಿಂದ ಜಾತ್ರಾ ಪ್ರಯುಕ್ತ ಬಪ್ಪನಾಡು ಮೇಳದವರಿಂದ ಯಕ್ಷಗಾನ ಬಯಲಾಟ “ನಾಡೂರ ನಾಗಬನ” ಪ್ರದರ್ಶನಗೊಳ್ಳಲಿದೆ ಎಂದು ಅನುವಂಶಿಯ ಆಡಳಿತ ಮೋಕ್ತೆಸರ ಕೆ.ಬಿ.ಹರಿಚಂದ್ರ ಬಲ್ಲಾಳ್, ಪ್ರಧಾನ ಅರ್ಚಕ ಅಶೋಕ್ ಕುಮಾರ್ ಬಾಂಗಿಣ್ಣಾಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here