ವೇಣೂರು: ವೇಣೂರು ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ.ಹೆಗ್ಗಡೆ ಮತ್ತು ಕುಟುಂಬಸ್ಥರಿಂದ ಬೆಳಿಗ್ಗೆ ಗಂಟೆ 7.00ರಿಂದ ನಿತ್ಯವಿಧಿಸಹಿತ ಆಹಾರ ದಾನಾ ವಿಧಿ, ಗಂಧ ಯಂತ್ರರಾಧನಾ ವಿಧಾನ ಮತ್ತಿತರ ಪೂಜಾವಿಧಿಗಳು, ಮಧ್ಯಾಹ್ನ ಗಂಟೆ 2.00ರಿಂದ ಸಮವಸರಣ ಪೂಜೆ, ಅಗ್ರೋದಕ ಮೆರವಣಿಗೆಯು ಪರಮ ಪೂಜ್ಯ 108 ಶ್ರೀ ಅಮೋಘಕೀರ್ತಿ ಮತ್ತು ಪರಮ ಪೂಜ್ಯ 108 ಶ್ರೀ ಅಮರಕೀರ್ತಿ ಮುನಿ, ಡಾ.ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಮಹಾ ಸ್ವಾಮೀಜಿ, ಸ್ಥಾಪಕ ವಂಶಿಯ ಅರಸರು ಮತ್ತು ಸಮಿತಿಯ ಕಾರ್ಯಾಧ್ಯಕ್ಷ ತಿಮ್ಮಣ್ಣರಸ ಡಾ. ಪದ್ಮಪ್ರಸಾದ್ ಅಜಿಲರು ಹಾಗೂ ಮಾತಾಜಿಯವರ ಉಪಸ್ಥಿತಿಯಲ್ಲಿ ಮಧ್ಯಾಹ್ನ ಸಮವಸರಣ ಪೂಜೆ ನಡೆಯಿತು.
ಸಂಜೆ ಗಂಟೆ 7.00ರಿಂದ 504 ಕಲಶಗಳಿಂದ ಮಹಾಮಸ್ತಕಾಬಿಷೇಕ, ಮಹಾಪೂಜೆ, ರಾತ್ರಿ 7.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಕಲಾವೈಭವ, ಬಾಹುಬಲಿ ಸ್ವಾಮಿಗೆ 504 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ, ಮಂಗಳಾರತಿ ನಡೆಯಲಿದೆ.
ರಾತ್ರಿ 9.30ರಿಂದ ಕಾರ್ಕಳ ಲಲಿತಕೀರ್ತಿ ಯಕ್ಧಗಾನ ಕಲಾಮಂಡಳಿ ಸದಸ್ಯರಿಂದ ಯಕ್ಷಗಾನ, ವಸ್ತು ಪ್ರದರ್ಶನ, ವೇದಿಕೆಯಲ್ಲಿ ಸ್ಪೂರ್ತಿ ಭಟ್ ಗುಂಡೂರಿ ಬಳಗದವರಿಂದ ಭಕ್ತಿಗೀತೆ-ಭಾವಗೀತೆ, ಶಿವಾಂಜಲಿ ಡ್ಯಾನ್ಸ್ ಇನ್ಸ್ ಸ್ಟಿಟ್ಯೂಟ್ ವೇಣೂರು ಇವರಿಂದ ನ್ರತ್ಯ ಪ್ರದರ್ಶನ ನಡೆಯಲಿದೆ.