


ಸೌತಡ್ಕ: ಉಜಿರೆ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಗೋಪಾಲಕೃಷ್ಣ ಹಾಗೂ ಡಾ.ಭಾರತಿ ದಂಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನು ತಮ್ಮ ಮಗಳಾದ ಡಾ.ಅಂಕಿತ ಜಿ ಭಟ್ ರೊಂದಿಗೆ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಆಚರಿಸಿ, ಸೇವಾಧಾಮದ ಕಾರ್ಯ ಚಟುವಟಿಕೆಗಳಿಗಾಗಿ ದೇಣಿಗೆ ಹಸ್ತಾoತರಿಸಿ, ಮುಂದಿನ ದಿನಗಳಲ್ಲಿ ಸೇವಾಧಾಮಕ್ಕೆ ಇನ್ನಷ್ಟು ಬೆಂಬಲ ನೀಡುವ ಭರವಸೆಯಿತ್ತರು.


ಈ ಸಂದರ್ಭದಲ್ಲಿ ಸೇವಾಭಾರತಿ ಖಜಾಂಚಿ ಹಾಗೂ ಸೇವಾಧಾಮದ ಸಂಸ್ಥಾಪಕರಾದ ಕೆ.ವಿನಾಯಕ ರಾವ್, ಸೇವಾಭಾರತಿ ಸೀನಿಯರ್ ಮ್ಯಾನೇಜರ್ ಚರಣ್ ಕುಮಾರ್ ಎಂ, ಸೇವಾಧಾಮದ ಫಿಸಿಯೋತೆರಪಿಸ್ಟ್ ಗಳಾದ ಗಣೇಶ್ ಕಾರ್ತಿಕ್, ಕು.ಸುರಕ್ಷಾ ಹಾಗೂ ಸರ್ವಿಸ್ ಸಂಯೋಜಕರಾದ ಧನಂಜಯ ಉಪಸ್ಥಿತರಿದ್ದರು.








