ಹತ್ಯಡ್ಕ: ಅರಿಕೆಗುಡ್ಡೆ ವನದುರ್ಗಾ ದೇವಿಯ ಸನ್ನಿಧಿಯಲ್ಲಿ ಬೆಳಗ್ಗೆ 8 ಗಂಟೆಯಿಂದ ಪುಣ್ಯಾಹ, ಗಣಪತಿ ಹೋಮ, ಶ್ವಶಾಂತಿ, ಚೋರ ಶಾಂತಿ, ನವಗ್ರಹ ಶಾಂತಿ, ಹೋಮ ಕಲಶಾಭಿಷೇಕ, ಅಂಕುರ ಪೂಜೆ, ಮಹಾ ಪೂಜೆ ನೆರವೇರಿತು.10 ಗಂಟೆಗೆ ಶಿಶಿಲ ಗ್ರಾಮಸ್ಥರು ಹೊರೆಕಾಣಿಕೆ ಸಮರ್ಪಿಸಿದರು.ಮಧ್ಯಾಹ್ನ ಅನ್ನಸಂತರ್ಪಣೆ ಬಳಿಕ 4 ಗಂಟೆಗೆ ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ಭಜನಾ ಮಂಡಳಿ ಮತ್ತು ಕಾಯರ್ತಡ್ಕ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.ಬಳಿಕ ದುರ್ಗಾ ಪೂಜೆ, ಮಂಟಪ ಸಂಸ್ಕಾರ, ವಾಸ್ವಾಧಿಗಳು, ಅನುಜ್ಞಾ ಕಲಶಪೂಜೆ, ಅಧಿವಾಸ ಹೋಮ, ಅಂಕುರ ಪೂಜೆ, ಮಹಾಪೂಜೆ ನಡೆಯಿತು.
6 ಗಂಟೆಯಿಂದ ಪ್ರಾರಂಭವಾದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಓಂ ಶ್ರೀ ಶಕ್ತಿಗುರುಮಠ ಜಗದ್ಗುರು ರಾಘವೇಂದ್ರ ಪೀಠ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ ಮಾತನಾಡಿ ನಂಬಿಕೆಯೇ ಜೀವನ.ಪ್ರಸ್ತುತ ದಿನಮಾನದಲ್ಲಿ ನಂಬಿಕೆಯ ಮತ್ತು ಬದುಕಿನ ಅಸ್ತಿತ್ವವನ್ನು ಪ್ರಶ್ನಿಸುವ ಕಾರ್ಯ ನಡೆಯುತ್ತಿದೆ.ಆದರೆ ಸುಮಾರು ವರುಷದಿಂದ ಈ ದೇಗುಲದ ನಿರ್ಮಾಣ ನಂಬಿಕೆಯ ಮೇಲೆ ನಿಂತಿತ್ತು.ಈಗ ನಂಬಿಕೆ ನಿಜವಾಗಿದೆ.ಶ್ರಮದಾನದ ಮೂಲಕ ದೇವಿಯನ್ನು ಗರ್ಭಗುಡಿಯಲ್ಲಿ ಕೂರಿಸುವ ಪ್ರತಿಜ್ಞೆ ಈಡೇರಿದೆ.ಖಂಡಿತವಾಗಿಯೂ ನಮ್ಮನ್ನು ತಾಯಿ ವನದುರ್ಗೆ ತನ್ನ ಮಗುವಂತೆ ಹರಾಸುತ್ತಾಳೆ.ನೆರೆದಿರುವ ಭಕ್ತರು ತಮ್ಮ ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆಯಾಗಿ ಪರಿವರ್ತಿಸಿ, ಭವ್ಯ ಭಾರತ ನಿರ್ಮಾಣಕ್ಕೆ ಇದು ಸಹಕಾರಿ ಎಂದು ಆಶೀರ್ವಚನ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರಾದ ಬಿ. ಜಯರಾಮ ನೆಲ್ಲಿತ್ತಾಯ ಶಿಶಿಲ ವಹಿಸಿದ್ದರು.ಸ್ನೇಹ ಶಿಕ್ಷಣ ಸಂಸ್ಥೆಯ ಚಂದ್ರಶೇಖರ ದಾಮ್ಲೆ ಧರ್ಮ ಸಂದೇಶ ನೀಡಿದರು.ಇನ್ನುಳಿದಂತೆ ವೇದಿಕೆಯಲ್ಲಿ ಶ್ರೀ.ಕ್ಷೇ.ಧ.ಗ್ರಾ ಯೋಜನೆಯ ಅರಸಿನಮಕ್ಕಿ ವಲಯ ಮೇಲ್ವಿಚಾರಕರಾದ ಶಶಿಕಲಾ, ಉದ್ಯಮಿಗಳಾದ ದಿನೇಶ್ ಮಯ್ಯ, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಕಾಟಾಜೆ ಇದರ ಆಡಳಿತ ಮೊಕ್ತೇಶರರಾದ ಎ.ಜಯದೇವ, ಅಗ್ರಿಲೀಫ್ ಬರೆಂಗಾಯದ ಅವಿನಾಶ್ ರಾವ್, ಬಾಲಾಜಿ ಮೆಡಿಕಲ್ ನೆಲ್ಯಾಡಿ ಮಾಲಕರಾದ ಉದಯ್ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಬಾಲಕೃಷ್ಣ ಶೆಟ್ಟಿ ಮುದ್ದಿಗೆ, ಅಣ್ಣು ಗೌಡ ನಾವಳೆ, ವಿಶ್ವನಾಥ ಆಚಾರ್ಯ ಸಂಕೇಷ, ರಾಮಕೃಷ್ಣ ಶೆಟ್ಟಿಗಾರ್ ಪಾಲೆಂಜ, ದಿನೇಶ್ ಕುಂಟಾಲಪಳಿಕೆ, ಹರ್ಷ ಕುಮಾರ್ ಬದ್ರಿಮಾರ್ ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ಧನ್ಯಶ್ರೀ ಪಾಳೆಂಜ, ನಿಖಿತಾ ಪಾಳೆಂಜ, ಪ್ರಾರ್ಥನಾ ಪಾಳೆಂಜ ಸ್ವಾಗತವನ್ನು ರಾಮಾಮೂರ್ತಿ ಟಿ ಪಿಲಿಕ್ಕಬೆ, ನಿರೂಪಣೆಯನ್ನು ದಿನಕರ್ ಕುರುಪ್, ಧನ್ಯವಾದವನ್ನು ಕೇಶವರಾವ್ ನೆಕ್ಕಿಲು ನೆರವೇರಿಸಿದರು.
ತದನಂತರ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ ಕಂಡಿತು.