


ಬೆಳಾಲು: ಮಾಯ ಶ್ರೀ ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಫೆ.20 ರಿಂದ 24 ರವರೆಗೆ ಆಲಂಬಾಡಿ ಪದ್ಮನಾಭಾ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು, ಇದರ ಅಂಗವಾಗಿ ಫೆ.20 ರಂದು ಬೆಳಿಗ್ಗೆ ಗಣಹೋಮ, ಮಾಯಗುತ್ತಿನ ಮನೆಯಲ್ಲಿ ಶಾರಿ ಹಾಕಿ ಗೊನೆ ಕಡಿಯುವುದು, ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆಯನ್ನು ಮೆರವಣಿಗೆ ಮೂಲಕ ಅರ್ಪಿಸಿದರು.

ಮಾಯ, ಕೊಲ್ಪಾಡಿ, ಬೆಳಾಲು ಪರಿಸರದ ಭಕ್ತರು, ಅನಂತೋಡಿ ಶ್ರೀ ಅನಂತಪದ್ಮನಾಭಾ ದೇವಸ್ಥಾನದ ಸಮಿತಿ ವತಿಯಿಂದ ವಾಹನ ಮೆರವಣಿಗೆಯಲ್ಲಿ ಬಂದು ಹೊರೆಕಾಣಿಕೆ ಅರ್ಪಿಸಿದರು.

ಬಳಿಕ ದೇವಸ್ಥಾನ ಪರಿಚಯ ಮತ್ತು ಕಾರ್ಯಕ್ರಮಗಳ ವಿವರದ ಶ್ರೀ ಪ್ರಸಾದ್ ಪುಸ್ತಕ ಬಿಡುಗಡೆಗೊಂಡಿತು.ಮೊಟ್ಟಿಕಲ್ಲು ಪಾದಪೂಜೆ, ಮಹಾ ಪೂಜೆ ನಡೆಯಿತು.