


ಬೆಳ್ತಂಗಡಿ: ಕೆ.ಟಿ.ಗಟ್ಟಿಯವರು ವೈಚಾರಿಕ ನೆಲೆಗಟ್ಟಿನ ಚಿಂತಕ, ಬರಹಗಾರರು, ಪ್ರಸಿದ್ಧ ಕಾದಂಬರಿಕಾರರು.


ಶಿಕ್ಷಣ ಮಾಧ್ಯಮ ಮತ್ತು ಭಾಷಾ ಕಲಿಕೆಯ ಬಗ್ಗೆ ವಿಶೇಷ ಅಧ್ಯಯನವುಳ್ಳವರಾಗಿದ್ದರು. ಆ ಬಗ್ಗೆ ಅಮೂಲ್ಯ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದವರು.
ಅವರೋರ್ವ ವೈಚಾರಿಕ ಚಿಂತನೆಯ ಬರಹಗಾರರೂ ಆಗಿದ್ದರು. ಅವರ ನಿಧನ ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಧ್ಯಕ್ಷರಾದ ಡಿ ಯದುಪತಿ ಗೌಡರು ಸಂತಾಪ ವ್ಯಕ್ತಪಡಿಸಿದ್ದಾರೆ.








