ನಡ: ಮಂಜೊಟ್ಟಿಯ ಹೋಲಿಕ್ರಾಸ್ ಚರ್ಚ್‌ನ ಆರಾಧ್ಯ ಪವಿತ್ರ ಶಿಲುಬೆಯ ಪುಣ್ಯ ಅವಶೇಷದ ಭವ್ಯ ಮೆರವಣಿಗೆ ಹಾಗೂ ಸಂಭ್ರಮ ಫೆ.18ರಂದು ಜರುಗಿತು.
ಬೆಳ್ತಂಗಡಿ ಹೋಲಿ ರೆಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ.ಕ್ಲಿಫರ್ಡ್ ಪಿಂಟೊ ಆಶೀರ್ವಚನ ನೆರವೇರಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್ ಪ್ರಧಾನ ಧರ್ಮಗುರು ವ.ಫಾ.ವಾಲ್ಟರ್ ಡಿ ಮೆಲ್ಲೊ, ಮಂಜೊಟ್ಟಿ ಚರ್ಚ್ ಧರ್ಮ ಗುರು ಫಾ.ಪ್ರವೀಣ್ ಡಿಸೋಜಾ ಉಪಸ್ಥಿತರಿದ್ದರು.
ಈ ಪವಿತ್ರ ಶಿಲುಬೆಯ ಪುಣ್ಯ ಅವಶೇಷವು ಮಂಜೊಟ್ಟಿ ಚರ್ಚ್‌ನ ಸದಸ್ಯ ವಿನ್ಸೆಂಟ್ ಪಿರೇರಾ ಮುಖಾಂತರ ಇಟಲಿ ದೇಶದಲ್ಲಿ ಕಾಪುಚಿನ್ ಪ್ರೊವಿನ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಂದನೀಯ ಜೊಸ್ಸಿ ಫೆರ್ನಾಂಡೀಸ್ ಇವರ ಮೂಲಕ ಮಂಜೊಟ್ಟಿ ಚರ್ಚ್‌ಗೆ ದೊರಕಿದೆ.ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನಾ ಅವರು ಅವಶೇಷವನ್ನು ಪ್ರತಿಷ್ಠಾಪಿಸಲು ಪರವಾನಿಗೆ ನೀಡಿದ್ದು.
ಫೆ.18ರಂದು ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನಿಂದ ಮಂಜೊಟ್ಟಿ ಹೋಲಿಕ್ರಾಸ್ ಚರ್ಚ್‌ಗೆ ಭವ್ಯ ಮೆರವಣಿಗೆ ಮೂಲಕ ತರಲಾಯಿತು.ತದನಂತರ ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ವಾಲ್ಟರ್ ಡಿ ಮೆಲ್ಲೋ ಅವರು ದಿವ್ಯ ಬಲಿಪೂಜೆ ಅರ್ಪಿಸಿದರು.ಪುಣ್ಯ ಅವಶೇಷದ ಪ್ರತಿಷ್ಠಾಪನೆಯನ್ನು ನೆರವೇರಿಸಿದರು.
ಧ್ಯಾನಕೂಟ: ಪೂರ್ವ ತಯಾರಿಯಾಗಿ ಕನ್ನಡ ಭಾಷೆಯಲ್ಲಿ ಮೂರು ದಿನಗಳ ಧ್ಯಾನಕೂಟ ಫೆ.15ರಿಂದ 17 ರ ವರೆಗೆ ಹೋಲಿ ಕ್ರಾಸ್ ಚರ್ಚಿನಲ್ಲಿ ಹಮ್ಮಿಕೊಳ್ಳಲಾಗಿತ್ತು.ಧ್ಯಾನಕೂಟವನ್ನು ಮದರ್ ಹೋಮ್ ರಿಟ್ರಿಟ್ ಸೆಂಟರ್ ಕಣ್ಣೂರಿನ ಧರ್ಮಗುರುಗಳ ತಂಡ ನೆರವೇರಿಸಿದರು.
ಹೋಲಿ ಕ್ರಾಸ್ ಚರ್ಚ್‌ನ ಧರ್ಮಗುರು ಪ್ರವೀಣ್ ಡಿ’ಸೋಜ, ಬೆಳ್ತಂಗಡಿ ಪಾಲನಾ ಮಂಡಳಿ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಫೌಲಿನ್ ರೇಗೊ, ಮಂಜೊಟ್ಟಿ ಪಾಲನಾ ಮಂಡಳಿ ಉಪಾಧ್ಯಕ್ಷ ಮಾರ್ಕ್ ಡಿಸೋಜಾ, ಕಾರ್ಯದರ್ಶಿ, ಹಾಗೂ ಸಾವಿರಾರು ಭಕ್ತರು ಮೆರವಣಿಗೆ ಯಲ್ಲಿ ಪಾಲ್ಗೊಂಡರು.