


ಮಚ್ಚಿನ: ಬಳ್ಳಮಂಜ ಶ್ರೀ ವಿದ್ಯಾಸಾಗರ ಸಿ.ಬಿ.ಎಸ್.ಇ ಶಾಲೆಯಲ್ಲಿ ಜ.25ರಂದು ಶಾಲಾ ವಾರ್ಷಿಕ ಸಮಾರಂಭ ವಿಜೃಂಭಣೆಯಿಂದ ನಡೆಯಿತು.
ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರು ಡಾ|| ಹರ್ಷ ಸಂಪಿಗೆತ್ತಾಯ ಇವರು ದೀಪ ಬೆಳಗಿಸಿ ಈ ಕಾರ್ಯಕ್ರಮ ಮತ್ತು ಈ ಶಾಲೆ ಅಭಿವೃದ್ಧಿಯಾಗಲೆಂದು ಆಶಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಶಭಿತ ರೆಡ್ಡಿಯವರು ವಾರ್ಷಿಕ ವರದಿ ಓದಿದರು.


ಮುಖ್ಯ ಅತಿಥಿಗಳಾದ ಪುಂಜಾಲಕಟ್ಟೆ K.P.S ಪ್ರೌಢಶಾಲಾ ವಿಭಾಗದ ಶಿಕ್ಷಕ ದರಣೇಂದ್ರ ಕೆ.ಜೈನ್ ರವರು ತುಂಬಾ ಅಚ್ಚುಕಟ್ಟಾಗಿ ಪ್ರಸ್ತುತ ನಡೆಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಪೋಷಕರ ಪಾತ್ರ, ಪೋಷಕರ ಶಿಕ್ಷರ ನಡುವೆ ಬಾಂಧವ್ಯದ ಬಗ್ಗೆ ಉದಾಹರಣೆಗಳನ್ನು ನೀಡಿ ಮಕ್ಕಳು ಸುಸಂಸ್ಕೃತರಾಗಲು ಒಳ್ಳೆಯ ಹಿತವಚನಗಳನ್ನು ನೀಡಿದರು.
ಶಾಲಾ ಮಕ್ಕಳಿಗೆ ಕ್ರೀಡೆ, ಕಲೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿದರು.
ಶಾಲಾ ಸಂಚಾಲಕರಾದ ವೆಂಕಟ ರೆಡ್ಡಿ H.Y ರವರು ಶಾಲೆಯಲ್ಲಿ ಪ್ರಸ್ತುತ ವಿದ್ಯಾಭ್ಯಾಸದ ಕುರಿತು, ನಮ್ಮ ಶಾಲೆಯಲ್ಲಿ ಶಿಕ್ಷಣದ ಗುಣ ಮಟ್ಟಕ್ಕೆಂದು ಪ್ರತಿ ಕೊಠಡಿಯಲ್ಲಿ ಟಿ.ವಿ ಹಾಕಿ ಟ್ಯಾಬ್ ಮುಖಾಂತರ ಮತ್ತು ಮಕ್ಕಳು ಮನೆಯಲ್ಲಿ ಸಹ ಶಿಕ್ಷಣಕ್ಕೆ ಅನುಕೂಲವಾಗಲೆಂದು ರಾಷ್ಟ್ರಮಟ್ಟದಲ್ಲಿ ಶಿಕ್ಷಣಕ್ಕೆ ಪೂರಕವಾದಂತೆ ವಾತಾವರಣ ನಾವು ಕಲ್ಪಿಸಿದ್ದೇವೆ.ಈ ಶಾಲೆಯು ನೀಡುವ ಶಿಕ್ಷಣವನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳು ಉನ್ನತ ಮಟ್ಟ ತಲುಪಲು, ಶ್ರಮಿಸಲು ಕರೆಕೊಟ್ಟರು.
ಶಾಲೆಯ ಶಿಕ್ಷಕ ಲಕ್ಷ್ಮೀಶರವರು ಸ್ವಾಗತಿಸಿ, ಡಾ|| ಮರ್ಷಾರೆಡ್ಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಶಿಕ್ಷಕಿಯರಾದ ಪ್ರೆಸಿಲ್ಲಾ, ವತ್ಸಲ, ಅಶ್ಮಿತಾ ಹಾಗೂ ಸಹ ಶಿಕ್ಷಕಿಯರು, ಶಿಕ್ಷಕೇತರ ಸಿಬ್ಬಂದಿಯವರ ಸಮಕ್ಷಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.








