ಬೆಳ್ತಂಗಡಿ: ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಗುರುವಾಯನಕೆರೆ ಇಲ್ಲಿ ಅಂತ್ಯವಿಶ್ರಾಂತಿ ಹೊಂದುತ್ತಿರುವ ಮಹಾತ್ಮರ ಹೆಸರಿನಲ್ಲಿ ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮಕ್ಕೆ ಫೆ.2 ರಂದು ಧ್ವಜಾರೋಹಣ ದ ಮೂಲಕ ಚಾಲನೆ ದೊರೆತಿದೆ.
ಸಯ್ಯಿದ್ ಕೂರತ್ ತಂಙಳ್ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಗಳ ನಿಮಿತ್ತ ಸಯ್ಯಿದ್ ಸಾದಾತ್ ತಂಙಳ್ ಮತ್ತು ದರ್ಗಾ ಸಮಿತಿ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್ ಧ್ವಜಾರೋಹಣ ನಡೆಸುವ ಮೂಲಕ ಚಾಲನೆ ನೀಡಿದರು.
ದರ್ಗಾ ಸಮಿತಿ ಕಾರ್ಯದರ್ಶಿ ಮುಹಮ್ಮದ್ ರಫಿ, ಕೋಶಾಧಿಕಾರಿ ಹಮೀದ್ ಮಿಲನ್, ಉಪಾಧ್ಯಕ್ಷರುಗಳಾದ ಅಬ್ದುಲ್ ರಹಿಮಾನ್ ಮೇಸ್ತ್ರಿ ಮತ್ತು ಇಬ್ರಾಹಿಂ ಕೋಡಿಸಭೆ, ಜೊತೆ ಕಾರ್ಯದರ್ಶಿಗಳಾದ ಹನೀಫ್ ಮತ್ತು ಉಮರಬ್ಬ, ಆಡಳಿತ ಸಮಿತಿ ಕಾರ್ಯದರ್ಶಿ ದಾವೂದ್ ಜಿ.ಕೆ, ಕೋಶಾಧಿಕಾರಿ ಮುತ್ತಲಿಬ್, ಉಪಾಧ್ಯಕ್ಷರುಗಳಾದ ಯು.ಕೆ ಇಸಾಕ್ ಮತ್ತು ಉಸ್ಮಾನ್ ಬಳಂಜ, ಜೊತೆ ಕಾರ್ಯದರ್ಶಿಗಳಾದ ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ಹೊಟೇಲ್, ಹಿರಿಯ ವಿದ್ವಾಂಸ ಯಾಕೂಬ್ ಮುಸ್ಲಿಯಾರ್ ಪಣಕಜೆ, ಮುದರ್ರಿಸ್ ಆದಂ ಅಹ್ಸನಿ, ಸದರ್ ನಾಸಿರ್ ಸಖಾಫಿ ಸಹಿತ ಸಿಬ್ಬಂದಿಗಳು, ದರ್ಗಾ ಕಮಿಟಿ ಮೆನೇಜರ್ ಆದಂ ಸಾಹೇಬ್, ಜಮಾಅತ್ ಕಚೇರಿ ಮೆನೇಜರ್ ಮುಹಮ್ಮದ್ ಇರ್ಶಾದ್ ಹಮ್ದಾನಿ ಸಹಿತ ಆಡಳಿತ ಸಮಿತಿ, ದರ್ಗಾ ಸಮಿತಿ, ದ್ಸಿಕ್ರ್ ಮತ್ತು ಸ್ವಲಾತ್ ಕಮಿಟಿ ಪದಾಧಿಕಾರಿಗಳು, ಜಮಾಅತ್ ಮತ್ತು ಅಂಗ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ದರ್ಗಾಕ್ಕೆ ಚಾದರ ಸಮರ್ಪಣೆ:
ಇದೇ ವೇಳೆ ಉದ್ಯಮಿ ಶುಕೂರ್ ಉಜಿರೆ ಇವರು ಉರೂಸ್ ಸಂದರ್ಭದಲ್ಲಿ ಒದಗಿಸಿಕೊಡುತ್ತಿರುವ ಚಾದರವನ್ನು, ಅವರು ಪವಿತ್ರ ಉಮ್ರಾ ಯಾತ್ರೆಯಲ್ಲಿರುವುದರಿಂದ ಅವರ ಸಹೋದರ, ಉದ್ಯಮಿ ಯು.ಕೆ ಮುಹಮ್ಮದ್ ಹನೀಫ್ ಅವರು ದರ್ಗಾಕ್ಕೆ ಹಾಸಿ ತಮ್ಮ ಸೇವೆ ಸಮರ್ಪಿಸಿದರು.ದರ್ಗಾ ಶರೀಫ್ ನಲ್ಲಿ ಫೆ.10 ರ ವರೆಗೆ ಉರೂಸ್ ನಡೆಯಲಿದೆ.