ನವೀಕೃತ ಗುರುವಾಯನಕೆರೆ ಮಸ್ಜಿದ್ ಪ್ರಾರ್ಥನೆಗೆ ಮುಕ್ತ- ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಮಂಡಳಿಯ ಕೋಶಾಧಿಕಾರಿ ಕುಂಬೋಳ್ ತಂಙಳ್ ರಿಂದ ಉದ್ಘಾಟನೆ

0

ಬೆಳ್ತಂಗಡಿ: ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ಇಲ್ಲಿ ಅತ್ಯಾಧುನಿಕ ಶೈಲಿಯಲ್ಲಿ ನವೀಕೃತಗೊಳಿಸಲಾಗಿರುವ ಮಸ್ಜಿದ್ ಫೆ.2 ರಂದು ಪ್ರಾರ್ಥನೆಗೆ ಮುಕ್ತಗೊಳಿಸಲಾಯಿತು.

ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಮಂಡಳಿಯ ಕೋಶಾಧಿಕಾರಿ ಅಸ್ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಉದ್ಘಾಟನೆ ಗೊಳಿಸಿ ಆಶೀರ್ವಚನ ನೀಡಿದರು.

ಅಧ್ಯಕ್ಷತೆಯನ್ನು ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಉಸ್ಮಾನ್ ಶಾಫಿ ವಹಿಸಿದ್ದರು. ಮಸ್ಜಿದ್ ಪ್ರಧಾನ ಧರ್ಮಗುರುಗಳಾದ ಅಸ್ಸಯ್ಯಿದ್ ಸಾದಾತ್ ತಂಙಳ್, ನವೀಕೃತ ಮಸ್ಜಿದ್‌ನ ಪ್ರಥಮ ಖುತುಬಾ ಪಾರಾಯಣ ನಡೆಸಿಕೊಟ್ಟರು. ಪ್ರಥಮ ಜುಮಾ ನಮಾಝ್ ಗೆ ಸಯ್ಯಿದ್ ಕುಂಬೋಳ್ ತಂಙಳ್ ನೇತೃತ್ವ ನೀಡಿದರು.

ಸಮಾರಂಭದಲ್ಲಿ ಆಡಳಿತ ಸಮಿತಿ ಕಾರ್ಯದರ್ಶಿ ದಾವೂದ್ ಜಿ.ಕೆ, ಕೋಶಾಧಿಕಾರಿ ಮುತ್ತಲಿಬ್, ಉಪಾಧ್ಯಕ್ಷರುಗಳಾದ ಯು‌.ಕೆ ಇಸಾಕ್ ಮತ್ತು ಉಸ್ಮಾನ್ ಬಳಂಜ, ಜೊತೆ ಕಾರ್ಯದರ್ಶಿಗಳಾದ ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ಹೊಟೇಲ್, ದರ್ಗಾ ಸಮಿತಿ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್ ಮೇಲಂತಬೆಟ್ಟು, ಕಾರ್ಯದರ್ಶಿ ಮುಹಮ್ಮದ್ ರಫಿ, ಕೋಶಾಧಿಕಾರಿ ಹಮೀದ್ ಮಿಲನ್, ಉಪಾಧ್ಯಕ್ಷರುಗಳಾದ ಅಬ್ದುಲ್ ರಹಿಮಾನ್ ಮೇಸ್ತ್ರಿ ಮತ್ತು ಇಬ್ರಾಹಿಂ ಕೋಡಿಸಭೆ, ಜೊತೆ ಕಾರ್ಯದರ್ಶಿಗಳಾದ ಹನೀಫ್ ಮತ್ತು ಉಮರಬ್ಬ, ಹಿರಿಯ ವಿದ್ವಾಂಸ ಯಾಕೂಬ್ ಮುಸ್ಲಿಯಾರ್ ಪಣಕಜೆ, ಮುದರ್ರಿಸ್ ಆದಂ ಅಹ್ಸನಿ, ಸದರ್ ನಾಸಿರ್ ಸಖಾಫಿ, ಮುಅದ್ದಿನ್ ರಹೀಂ ಉಸ್ತಾದ್, ಧರ್ಮಗುರುಗಳಾದ ಶರೀಫ್ ಝುಹುರಿ, ನೌಶಾದ್ ಉಸ್ತಾದ್, ದರ್ಗಾ ಕಮಿಟಿ ಮೆನೇಜರ್ ಆದಂ ಸಾಹೇಬ್, ಜಮಾಅತ್ ಕಚೇರಿ ಮೆನೇಜರ್ ಮುಹಮ್ಮದ್ ಇರ್ಶಾದ್ ಹಮ್ದಾನಿ ಸಹಿತ ಆಡಳಿತ ಸಮಿತಿ, ದರ್ಗಾ ಸಮಿತಿ, ದ್ಸಿಕ್ರ್ ಮತ್ತು ಸ್ವಲಾತ್ ಕಮಿಟಿ ಪದಾಧಿಕಾರಿಗಳು, ಜಮಾಅತ್ ಮತ್ತು ಅಂಗ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಯ್ಯಿದ್‌ ಕುಂಬೋಳ್ ತಂಙಳ್ ರನ್ನು ನ‌ಅತ್ ಆಲಾಪನೆ ಮೂಲಕ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು.ಬಳಿಕ ಅನ್ನದಾನ ನಡೆಯಿತು.

LEAVE A REPLY

Please enter your comment!
Please enter your name here