ಬೆಳ್ತಂಗಡಿ: ತಾರತಮ್ಯವಿಲ್ಲದೆ ಎಲ್ಲಾ ಅರ್ಹರಿಗೂ ಸರಕಾರದ ಸೌಲಭ್ಯ ತಲುಪಬೇಕು ಎಂಬ ಮಹಾನ್ ಉದ್ದೇಶ ಕೇಂದ್ರದ ಬಜೆಟ್‌ನಲ್ಲಿರುವುದು ಸುಸ್ಪಷ್ಟ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ತಿಳಿಸಿದ್ದಾರೆ.
ಬಡವರು, ಮಹಿಳೆಯರು, ಯುವಜನರು ಮತ್ತು ಅನ್ನದಾತರೆಂಬ ನಾಲ್ಕು ದೇಶದ ಆಧಾರಸ್ತಂಭಗಳ ಬಗ್ಗೆ ಬಜೆಟ್ ಸಂಪೂರ್ಣ ಕೇಂದ್ರೀಕರಿಸಿದ್ದು, ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಧ್ಯೇಯದಡಿ 2047 ರವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡುವ ಸಂಕಲ್ಪವನ್ನು ಬಜೆಟ್ ಪುನರುಚ್ಚರಿಸಿದೆ.
ಮುಂದಿನ ಪೀಳಿಗೆಯನ್ನು ಗುರಿಯನ್ನಾಗಿರಿಸಿಕೊಂಡು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ವಿಕಸಿತ ಭಾರತವಾಗಲಿದೆ.
ರೈತರ ಆದಾಯ ಹೆಚ್ಚಿಸಲು ಅವರಿಗೆ ಅಗತ್ಯವಾದ ನೆರವು ನೀಡುವ, ಒಂದು ಕೋಟಿ ಮನೆಯ ಮೇಲೆ ಸೋಲಾರ್ ಫಲಕಗಳನ್ನು ಅಳವಡಿಸುವ, ಆಯುಷ್ಮಾನ್ ಯೋಜನೆಯನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೂ ವಿಸ್ತರಿಸುವ ಯೋಜನೆಯು ಸ್ವಾಗತಾರ್ಹವಾಗಿದೆ. ಒಟ್ಟಿನಲ್ಲಿ ದೇಶದ ಸರ್ವರೀತಿಯ ಉನ್ನತಿಗೆ ಬಜೆಟ್ ಪೂರಕವಾಗಿದೆ ಎಂದು ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.