ರೈತರ, ಯುವಜನರ, ಬಡವರ, ಮಧ್ಯಮ ವರ್ಗದವರ ವಿರೋಧಿ ಬಜೆಟ್: ರಕ್ಷಿತ್ ಶಿವರಾಂ

0

ಬೆಳ್ತಂಗಡಿ: ಭಾವನಾತ್ಮಕ ವಿಚಾರವನ್ನು ಕೆರಳಿಸಿ ರೈತರು, ಬಡವರು ಮತ್ತು ಮಧ್ಯಮ ವರ್ಗದವರನ್ನು ಕೇವಲ ವೋಟಿಗಾಗಿ ಬಳಕೆ ಮಾಡಲಾಗುತ್ತಿದೆ.ಈ ವರ್ಗದ ಪರವಾಗಿ ಯಾವುದೇ ದೊಡ್ಡ ಕಾರ್ಯಕ್ರಮ ಘೋಷಣೆ ಆಗಿಲ್ಲ.ತಲೆಗಿಂತ ಕಿರೀಟ ದೊಡ್ಡದು ಎನ್ನುವ ರೀತಿಯಲ್ಲಿದೆ.2024-25 ರ ಬಜೆಟ್ ಒಟ್ಟು ಗಾತ್ರ 47 ಲಕ್ಷ ಕೋಟಿ, 2024-25 ರ ಎಲ್ಲಾ ಮೂಲಗಳಿಂದ ಅಂದಾಜಿಸಿರುವ ಆದಾಯ 33 ಲಕ್ಷ ಕೋಟಿ, 2023-24 ರ ಎಲ್ಲಾ ಮೂಲಗಳಿಂದ ಅಂದಾಜಿಸಿರುವ ಆದಾಯ 26 ಲಕ್ಷ ಕೋಟಿ.ಆದರಿಂದ ಮೋದಿಯವರ ಭಾಷೆಯಲ್ಲಿ ಹೇಳುವುದಾದರೆ ಇದು ಒಂದು “ಜುಮ್ಲಾ ಬಜೆಟ್ ” ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here